ಬಹುಭಾಷಾ ನಟಿ ದಿ.ವಿನ್ನಿ ಫರ್ನಾಂಡಿಸ್ ಸ್ಮರಣಾರ್ಥ ಸಂಗೀತ ರಸ ಸಂಜೆ

IMG-20220728-WA0010
Published on

ಮಂಗಳೂರು: ಬಹುಭಾಷಾ ಸಿನಿಮಾ ನಟಿ ದಿ.ವಿನ್ನಿ ಫರ್ನಾಂಡಿಸ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ನೆನಪಿಗಾಗಿ ಸಂಗೀತ ರಸ ಸಂಜೆ ಕಾರ್ಯಕ್ರಮ ಜು.31ರಂದು ಸಂಜೆ 6.30ಕ್ಕೆ ನಗರದ ಡಾನ್‌ಬೊಸ್ಕೋ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕಿ ಪ್ರತಿಭಾ ಸಲ್ಡಾನಾ ತಿಳಿಸಿದ್ದಾರೆ.
ಕನ್ನಡ, ತುಳು, ಕೊಂಕಣಿ, ಬ್ಯಾರಿ, ತಮಿಳು ಸೇರಿದಂತೆ ಸುಮಾರು 105ಕ್ಕೂ ಅಧಿಕ ಚಲನಚಿತ್ರಗಳಲ್ಲಿ ವಿನ್ನಿ ಫರ್ನಾಂಡಿಸ್ ಅಭಿನಯಿಸಿದ್ದು, ಕೆಲವು ಟೆಲಿಚಿತ್ರಗಳನ್ನು ನಿರ್ಮಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಕಳೆದ ವರ್ಷ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಅವರನ್ನು ಮತ್ತೆ ನೆನಪಿಸುವ ಉದ್ದೇಶದಿಂದ ಸಂಗೀತ ರಸ ಸಂಜೆಗೆ ಆಯೋಜಿಸಲಾಗಿದ್ದು, ಉಚಿತ ಪ್ರವೇಶವಿದೆ. ಮುರಳೀಧರ ಕಾಮತ್ ಅವರ ತಂಡದಿಂದ ಸಂಗೀತ ಕಾರ‌್ಯಕ್ರಮ ಜರುಗಲಿದೆ. ಸಭಾ ಕಾರ‌್ಯಕ್ರಮದಲ್ಲಿ ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತಿ ವಿನ್ಸೆಂಟ್ ಫರ್ನಾಂಡಿಸ್, ವಿಲ್ಫ್ರೆಡ್ ಫರ್ನಾಂಡಿಸ್, ಡಾ. ಧೀರಜ್ ಪವಾರ್ ಹಾಗೂ ವಿಹಾನ್ ಸಲ್ಡಾನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net