ಬಹುಭಾಷಾ ನಟಿ ವಿನ್ನಿ ಫರ್ನಾಂಡಿಸ್‌ ನಿಧನ

vinni
Published on

ಮಂಗಳೂರು: ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊಂಕಣಿ ನಾಟಕಗಳಲ್ಲಿ ನಟನೆ ಮಾಡುವ ಮೂಲಕ ಕಲಾಜೀವನ ಆರಂಭಿಸಿದ ಅವರಿಗೆ ಬಳಿಕ, ತುಳು-ಕನ್ನಡದಲ್ಲೂ ಅವಕಾಶ ಲಭಿಸಿತು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net