ಚಿತ್ರನಟಿ ರಕ್ಷಿತಾರಿಂದ ಬೆಳ್ಳಿ ಗಂಟೆ ಸಮರ್ಪಣೆ

Rakshitha Kutthar Visit
Published on

ಉಳ್ಳಾಲ: ಇಟ್ಟ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಚಿತ್ರನಟಿ ರಕ್ಷಿತಾ ಪ್ರೇಮ್ ಬುಧವಾರ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಆಗಮಿಸಿ ಬೆಳ್ಳಿದೀಪ ಮತ್ತು ಬೆಳ್ಳಿಯ ಘಂಟೆ ಹರಕೆ ರೂಪದಲ್ಲಿ ಸಲ್ಲಿಸಿದ್ದಾರೆ.

ಮನದಲ್ಲಿದ್ದ ಆಸೆ ಈಡೇರಿದರೆ ಕೊರಗಜ್ಜನ ಕ್ಷೇತ್ರಕ್ಕೆ ಬೆಳ್ಳಿ ದೀಪ ಮತ್ತು ಬೆಳ್ಳಿ ಘಂಟೆ ನೀಡುವ ಹರಕೆ ಹೊತ್ತಿದ್ದರು. ಅದರಂತೆ ತಮ್ಮ ಆಶಯ ಈಡೇರಿದೆ ಎಂದು ಅವರು ತಿಳಿಸಿದ್ದಾರೆ. ಕುತ್ತಾರ್‌ನಲ್ಲಿ ಅವರ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net