ಪಾಲಕರಿಗೆ ಮೊದಲ ಗೌರವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಹೇಳಿಕೆ

3kateelu rachita 1
Published on

ಮಂಗಳೂರು: ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು, ಅವರಿಗೆ ನೋವು ಕೊಡಬೇಡಿ ಎಂದು ಸಿನಿಮಾ ನಟಿ ರಚಿತಾ ರಾಮ್ ಹೇಳಿದರು.


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಭ್ರಮರ ಇಂಚರ ನುಡಿಹಬ್ಬದಲ್ಲಿ ಸಿನಿಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉತ್ತಮ ಶಿಕ್ಷಣ ಸಂಸ್ಥೆ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಎಂದರು.


ನಟ ರಮೇಶ್ ಭಟ್ ಮಾತನಾಡಿ, ಎಲ್ಲ ಜನರಲ್ಲಿ ಒಬ್ಬ್ಬೊಬ್ಬ ಕಲಾವಿದನಿದ್ದಾನೆ ಅದು ಬೇರೆ ಬೇರೆ ರೀತಿಯದ್ದಾಗಿರಬಹುದು, ಆಸಕ್ತಿದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಅದರ ಜತೆ ಕೇಂದ್ರೀಕೃತಗೊಳಿಸಿ ಆಗ ಸಾಧನೆ ಸಾಧ್ಯ, ಮಕ್ಕಳು ಪಾಠ ಮಾತ್ರವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.


ಉದ್ಯಮಿಗಳಾದ ಮೋಹನ್ ಕುಮಾರ್ ಮಂಗಳೂರು, ಗಿರೀಶ್ ಶೆಟ್ಟಿ ಕಟೀಲು, ಪ್ರಶೀಲ್ ಶೆಟ್ಟಿ ಕುಡ್ತಿಮಾರುಗುತ್ತು, ವೃಂದಾ ಹೆಗ್ಡೆ, ಸಮೇಳನಾಧ್ಯಕ್ಷ ಕೆ.ಪಿ.ರಾವ್, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಉಪ ಪ್ರಾಶುಂಪಾಲ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.

ನಾಲ್ಕು ವಿದ್ಯಾರ್ಥಿಗಳು ರಚಿತಾ ರಾಮ್ ಅವರ ಬೇರೆ ಬೇರೆ ರೀತಿಯ ಭಾವಚಿತ್ರ ರಚಿಸಿದ್ದು, ಸ್ವತಃ ರಚಿತಾ ರಾಮ್ ಅವರನ್ನು ವೇದಿಕೆಗೆ ಕರೆದು ಅವರೊಂದಿಗೆ ಚಿತ್ರ ಬಿಡಿಸಿದ ಬಗ್ಗೆ ವಿವರಣೆ ಕೇಳಿದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net