ಮುರ್ಡೇಶ್ವರಕ್ಕೆ ನಟಿ ಪೂಜಾ ಗಾಂಧಿ ಭೇಟಿ

Pooja gandhi
Published on

ಭಟ್ಕಳ: ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರಕ್ಕೆ ಕನ್ನಡ ಚಲನಚಿತ್ರ ನಟಿ ಪೂಜಾ ಗಾಂಧಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಉತ್ತರ ಪ್ರದೇಶ ಮೂಲದ ನಟಿ ಪೂಜಾ ಗಾಂಧಿ ಈಗ ಕನ್ನಡ ಕಲಿತು, ಕನ್ನಡದ ಹುಡುಗನನ್ನೇ ಮದುವೆಯಾಗಿ ಪಕ್ಕಾ ಕನ್ನಡತಿ ಆಗಿದ್ದಾರೆ. 40 ವರ್ಷದ ನಟಿ ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಿರುವ ಪೂಜಾ ಗಾಂಧಿ ಈಗ ಕನ್ನಡ ನೆಲದ ಮಗಳು ಎನ್ನುವ ರೀತಿ ಆಗಿದ್ದಾರೆ. ಸದ್ಯ ಅವರು ಸಹೋದರಿ ಹಾಗೂ ಸ್ನೇಹಿತೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಹಾಗೂ ಇಡುಗುಂಜಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net