

ಬೆಂಗಳೂರು: ನಂದ ಲವ್ಸ್ ನಂದಿತಾ ಸಿನಿಮಾ ನಂತರ ಜಿಂಕೆಮರಿ ಅಂತಲೇ ಜನರಿಂದ ಕರೆಸಿಕೊಂಡ ಶ್ವೇತಾ ಅಲಿಯಾಸ್ ನಂದಿತಾ. ಈ ನಟಿ ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಎನ್ನುವಷ್ಟರ ಮಟ್ಟಿಗೆ ಸಖತ್ ಹಿಟ್ ಸಿನಿಮಾ ಮಾಡಿರುವ ನಟಿ. ಈ ಹೀರೋಯಿನ್ ಸಂದರ್ಶನವೊಂದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ , ಬಾಡಿ ಶೇಮಿಂಗ್ ಕುರಿತಾಗಿ ಮಾತನಾಡಿದ್ದಾರೆ.
’ನಂದ ಲವ್ಸ್ ನಂದಿತಾ’ ಚಿತ್ರದಲ್ಲಿ ಅವರ ಅಭಿನಯ ಜಗತ್ತಿಗೇ ಗೊತ್ತಾಯ್ತು. ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಗುರುತಿಸಿಕೊಂಡರು. ಆಂಕರ್ ಶ್ವೇತಾ ಆಗಿ ಗುರುತಿಸಿಕೊಂಡಾಕೆ ಈ ಸಿನಿಮಾ ಮೂಲಕ ನಂದಿತಾ ಆದ್ರು. ಆಮೇಲೆ ತಮ್ಮ ಹೆಸರನ್ನು ನಂದಿತಾ ಅಂತ ಚೇಂಜ್ ಮಾಡ್ಕೊಂಡ್ರು.
ಸೋಷಿಯಲ್ ಮೀಡಿಯಾದಲ್ಲಿ ಸಣ್ಣಗಿದ್ದೆ ಈಗ ದಪ್ಪ ಆಗಿದ್ಯಾ ಅಂತ ಕಾಮೆಂಟ್ ಮಾಡುತ್ತಾರೆ. ನಾವು ಮನುಷ್ಯರು ದಪ್ಪ ಸಣ್ಣ ಆಗುತ್ತಲೇ ಇರುತ್ತೀವಿ. ಕೆಲವೊಮ್ಮೆ ಅವರಿಗೆಲ್ಲಾ ಉತ್ತರ ಕೊಡಬೇಕಾ ಅನಿಸಿಬಿಡುತ್ತದೆ. ಗುಂಡು ಗುಂಡಗಿದ್ದರೆ ನನಗೆ ತುಂಬಾನೇ ಇಷ್ಟ. ಜೀವನದ ಯಾವುದೇ ಕ್ಷಣವಾಗಲಿ ನಾನು ಹೇಗೆ ಇದ್ದರೂ ತುಂಬಾನೇ ಖುಷಿಯಾಗಿರುತ್ತೀನಿ ಎಂದು ನಂದಿತಾ ಮಾತನಾಡಿದ್ದಾರೆ.
ವಯಸ್ಸಿಗೆ ತಕ್ಕ ಹಾಗೆ ನಮ್ಮ ಲೈಫ್ ಸ್ಟೈಲ್ ಬದಲಾಗುತ್ತದೆ, ನಿದ್ರೆ ಮಾಡುವ ಸಮಯ ಬದಲಾಗುತ್ತದೆ. ಆ ಸದಾ ಜೀರೋ ಫಿಗರ್‌ನಲ್ಲಿ ಇರುವುದಕ್ಕೆ ಆಗಲ್ಲ. ಹಣ ಇದ್ದು ಏನೇ ಬದಲಾವಣೆಗಳು ಮಾಡಿಕೊಂಡರೂ ಶಾಶ್ವತವಲ್ಲ. ಹೀಗೆ ಇರುವಾಗ ಯಾಕೆ ನಾವು ತಲೆ ಕೆಡಿಸಿಕೊಳ್ಳಬೇಕು? ನನ್ನ ಕೈಗಳು ದಪ್ಪ ಇದೆ ಎಂದು ಕಾಮೆಂಟ್ ಮಾಡುತ್ತಾರೆ ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ ಖುಷಿಯಿಂದಲೇ ಓ ನನ್ನ ಕೈಗಳಿಗೂ ಫ್ಯಾನ್ಸ್ ಇದ್ದಾರೆ ಎಂದು ಖುಷಿ ಪಡುವೆ' ಎಂದು ನಂದಿತಾ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾಗೆ ಇಳಿದು ನಮ್ಮ ಇಮೇಜ್ ನಾವೇ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದೀವಿ. ಮೆಂಟಲ್ ಹೆಲ್ತ್ ಮೇಲೆ ಪರಿಣಾಮ ಬೀರುತ್ತದೆ. ಎಷ್ಟು ಬೇಕು ಅಷ್ಟು ತೋರಿಸಬೇಕು, ಪರ್ಸನಲ್ ಲೈಫ್ ಮತ್ತು ಪ್ರೋಫೆಶನ್ ನಡುವೆ ವ್ಯತ್ಯಾಸ ಇರಲಿ ಸಣ್ಣ ಗೆರೆ ಹಾಕಬೇಕು ಎಂದಿದ್ದಾರೆ. 2008ರಲ್ಲಿ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಂದಿತಾ ಶ್ವೇತಾ ಸದ್ಯ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.