ರಾಯರ ಮಠದಲ್ಲಿ ನಟ ಉರುಳು ಸೇವೆ

RAICHUR
RAICHUR
Published on

ರಾಯಚೂರು ಮಾದೇವ ಸಿನಿಮಾ ಯಶಸ್ಸಿಗಾಗಿ ಚಿತ್ರನಟ ವಿನೋದ್ ಪ್ರಭಾಕರ ಹಾಗೂ ತಂಡದವರು ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ಉರುಳು ಸೇವೆ ಮಾಡಿ, ನಗರದ ಹನುಮಾನ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಕೆಲ ದಿನಗಳಿಂದ ಮಹಾದೇವ ಚಿತ್ರ ಯಶಸ್ವಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಅದರಂತೆ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರವ ಸನ್ನಿಧಿಯಲ್ಲಿ ಉರುಳು ಸೇವೆ ಮಾಡಿ ದರ್ಶನ ಪಡೆದರು. ನಂತರ ನಗರದ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ಈ ವೇಳೆ ನಟ ವಿನೋದ ಪ್ರಭಾಕರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೂ ಹಾಗೂ ನನ್ನ ತಂದೆಯರಿಗೆ ಉತ್ತರ ಕರ್ನಾಟಕದಲ್ಲಿ ಅಪಾರವಾದ ಅಭಿಮಾನ ಬಳಗವಿದೆ. ಸಿನಿಮಾ ಯಶಸ್ವಿಗೆ ಬೆಂಬಲ ನೀಡುತ್ತಾರೆ. ಜೂನ್ 06 ರಂದು ಮಹಾದೇವ ಚಿತ್ರ ಬಿಡುಗಡೆಯಾಗಲಿದ್ದು, ಇಡೀ ಚಿತ್ರ ತಂಡದಿಂದ ಪ್ರಚಾರ ನಡೆಸಿದ್ದೇವೆ . ಸುಮಾರು ದಿನಗಳಿಂದ ರಾಯದ ದರ್ಶನ ಪಡೆಯಬೇಕು ಎಂದುಕೊಂಡಿದ್ದೆ ಅದರಿಂದ ರಾಯರ ಮಠದಲ್ಲಿ ಉರುಳು ಸೇವೆ ಮಾಡಿ ಸೇವೆ ಸಲ್ಲಿಸಿರುವೆ ಎಂದರು.

ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿ ವಿಚಾರದಲ್ಲಿ ನಮ್ಮಲ್ಲಿ ಚರ್ಚೆ ನಡೆಯುತ್ತಿದ್ದು, ಈ ಹಿಂದೆ ಪುನೀತ್ ರಾಜಕುಮಾರ ಅವರು ನಂದಿನಿಗೆ ರಾಯಭಾರಿಯಾಗಿದ್ದರು. ಈ ಕುರಿತು ಚಿತ್ರರಂಗದವರು ಚರ್ಚೆ ಮಾಡುತ್ತಿದ್ದಾರೆ. ನಮ್ಮವರು ಬ್ರ್ಯಾಂಡ್ ಖಂಡಿತ ಆಗೇ ಆಗುತ್ತಾರೆ. ಅವಕಾಶ ದೊರೆತರೆ ನಾನು ಮಾಡುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net