ನನ್ನ ಅಕ್ಕ-ಪಕ್ಕದಲ್ಲಿರುವ ಎಲ್ಲರೂ ಚೆನ್ನಾಗಿರೋದರಿಂದಲೇ ನಾನು ಹೀಗಿದ್ದೇನೆ: ದಚ್ಚು ಫ್ಯಾನ್ಸ್​​ಗೆ ಟಾಂಗ್​ ಕೊಟ್ರಾ ಕಿಚ್ಚ?

Sudeep
Published on

ಕಳಂಕ ತರುವ ಕೆಲಸ ನನ್ನ ಫ್ಯಾನ್ಸ್​​ ಮಾಡಿಲ್ಲ!

ಅಭಿಮಾನಿಗಳನ್ನ ಹಾಡಿ ಹೊಗಳಿದ ಕಿಚ್ಚ!

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್​​ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ( ಸೆಪ್ಟೆಂಬರ್‌ 02) ಕಿಚ್ಚ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್‌ ಅಭಿಮಾನಿಗಳ ಕುರಿತಾಗಿ ಮೆಚ್ಚುಗೆ ಮಾತನಾಡಿದ್ದಾರೆ.

ಸುದೀಪ್​​ ಮಾತನಾಡಿ, ಅಭಿಮಾನಿಗಳು ನಮ್ಮ ಪ್ರತಿಬಿಂಬವಾಗಿದ್ದಾರೆ. ನಾವು ಹೋದಲೆಲ್ಲಾ ತಲೆ ಎತ್ತಿಕೊಂಡು ಓಡಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಅಭಿಮಾನಿಗಳು ಕಾರಣವಾಗಿದ್ದಾರೆ. ನಾವು ಸಂಪಾದನೆ ಮಾಡಿರುವ ನಮ್ಮ ಹೆಸರಿಗೆ ಯಾವತ್ತೂ ಕಳಂಕ ತರುವಂತಹ ಯಾವುದೇ ಕೆಲಸವನ್ನು ಇವರು ಮಾಡಿಲ್ಲ. ಮಾಡೋದು ಇಲ್ಲ ಇದು ಬಹಳ ಮುಖ್ಯವಾಗುತ್ತದೆ. ನಾನು ಈ ಮಾತನ್ನು ಪದೇ ಪದೇ ಹೇಳುತ್ತಿರುತ್ತೇನೆ ಎಂದಿದ್ದಾರೆ.

ಸಿನಿಮಾವನ್ನು ನಾವು ಎಲ್ಲರೂ ಮಾಡುತ್ತೇವೆ. ಸಕ್ಸೆಸ್​​ನ್ನು ಕನ್ನಡ ಚಿತ್ರರಂಗದಲ್ಲಿರುವ ಎಷ್ಟೋ ದೊಡ್ಡ ಕಲಾವಿದರು, ಹಿರಿಯ ಕಲಾವಿದರು ಸೇರಿದಂತೆ ಪ್ರತಿಯೋಬ್ಬರು ದೊಡ್ಡ ಹಿಟ್​ ನೀಡುತ್ತಾರೆ. ಒಳ್ಳೆಯ ನಟರು ಆಗುತ್ತಾರೆ. ಆದರೆ  ವ್ಯಕ್ತಿತ್ವದಲ್ಲಿ ನಾವು ದೊಡ್ಡವರು ಆಗಬೇಕಾದರೆ ಸಿನಿಮಾ ಮಾತ್ರ ಸಾಕಾಗುವುದಿಲ್ಲ. ನನ್ನ ಅಕ್ಕ-ಪಕ್ಕ ಇರುವ ಸ್ನೇಹಿತರು, ಕುಟುಂಬ ಹಾಗೂ ಪ್ರತಿಯೊಬ್ಬರು ಮುಖ್ಯವಾಗ್ತಾರೆ. ತಪ್ಪಿದಾಗೆಲ್ಲ ತಿದ್ದಿ ಬುದ್ದಿ ಹೇಳುವ ನನ್ನ ಮಾಧ್ಯಮ ಮಿತ್ರರೂ ಸೇರಿದಂತೆ ಇವರೆಲ್ಲರೂ ನನ್ನ ಜೀವನದಲ್ಲಿ ಚೆನ್ನಾಗಿದ್ದಾರೆ. ಹೀಗಾಗಿ ನಾನು ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ.

ನನ್ನ ಫ್ಯಾನ್ಸ್​​ ನನ್ನ ಹೆಸರಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರೆ. ಅವರೆಲ್ಲ ಬೆಳೆಯುತ್ತಿರುವ ವಾತಾವರಣ ಅಷ್ಟು ಚೆನ್ನಾಗಿದೆ ಎಂದು ಅರ್ಥ. ನನನ್ನ ಅಭಿಮಾನಿಗಳು ಒಳ್ಳೆಯ ಕೆಲಸ ಮಾಡುತ್ತಿರುವುದು ನಾನು ಎನೋ ಹೇಳಿದ್ದೇನೆ ಎಂದು ಅರ್ಥವಲ್ಲ. ನನ್ನ ಫ್ಯಾನ್ಸ್​​ನಲ್ಲಿ ಒಳ್ಳೆಯತನ ಇದೆ. ಹೀಗಾಗೆ ನಾವು ಇಷ್ಟು ಒಳ್ಳೆಯವರು ಎಂದು ಹೇಳಿದ್ದಾರೆ.

ಕಿಚ್ಚ ಹುಟ್ಟುಹಬ್ಬದಂದು ತಮ್ಮ ಫ್ಯಾನ್ಸ್​​ ಕುರಿತಾಗಿ ಮೆಚ್ಚುಗೆ ಮಾತನಾಡಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಕೆಲವರು ದಚ್ಚು ಫ್ಯಾನ್ಸ್​ಗೆ ಕಿಚ್ಚ ಕಿವಿ ಮಾತು ಹೇಳಿದ್ರಾ? ಎನ್ನುತ್ತಿದ್ದಾರೆ. ಅದೇನೆ ಇರಲಿ ಕಿಚ್ಚ ಮಾತ್ರ ತಮ್ಮ ಅಭಿಮಾನಿಗಳನ್ನು ಹಾಡಿ ಹೋಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net