

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬಹುನಿರೀಕ್ಷಿತ ಈ ಒಂದು ಟೀಸರ್‌ನಲ್ಲಿ ಕಿಚ್ಚನ ಖದರ್ ಅನಾವರಣಗೊಂಡಿದೆ.
‘ಬಾ ಬಾ ಬ್ಲಾಕ್ ಶೀಪ್’ ಎನ್ನುತ್ತಾ ಖಡಕ್ ಧ್ವನಿಯಲ್ಲಿ ಟೀಸರ್ ಅನ್ನು ಅಭಿಮಾನಿಗಳ ಮುಂದೆ ಪ್ರಸ್ತುತ ಪಡಿಸಿದ್ದಾರೆ ಕಿಚ್ಚ ಸುದೀಪ್. ಟೀಸರ್ ನಲ್ಲಿ ಸುದೀಪ್ ಖಡಕ್ ಆಗಿ ಕಾಣಿಸಿಕೊಂಡಿದ್ದು, ಟೀಸರ್ನ ಕಲರ್ ಟೋನ್ನೇ ಹೇಳುತ್ತಿದೆ ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತದೆ.
ತೆಲುಗಿನ ನಟ ಸುನಿಲ್ ಅನ್ನು ವಿಲನ್ ಆಗಿ ತೋರಿಸಲಾಗಿದೆ. ವರಲಕ್ಷ್ಮಿ ಶರತ್ಕುಮಾರ್ ಪಾತ್ರವನ್ನೂ ತುಸು ಹೈಲೆಟ್ ಮಾಡಲಾಗಿದ್ದು, ವರಲಕ್ಷ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ.ಸುದೀಪ್ ಒಟ್ಟಿಗೆ ಎರಡು ಆಯುಧಗಳನ್ನು ಹಿಡಿದು ತಮ್ಮನ್ನು ಕೊಲ್ಲಲು ಬರುವ ಗೂಂಡಾಗಳ ಮೇಲೆ ಹಾರಿ ಬೀಳುವ ದೃಶ್ಯವಿದೆ. ಕೊನೆಯಲ್ಲಿ ಸುದೀಪ್ ಒಳ್ಳೆ ಸ್ಟೆಪ್ ಸಹ ಹಾಕಿದ್ದಾರೆ. ಅವರ ಹಿನ್ನೆಲೆಯಲ್ಲಿ ಕಾಣುವ ಮಹಾಕಾಳಿಯ ವಿಗ್ರಹವೂ ಗಮನ ಸೆಳೆಯುತ್ತಿದೆ.
ಮ್ಯಾಕ್ಸ್ ಸಿನಿಮಾ ಈ ವರ್ಷದ ಕಿಚ್ಚನ ಬಹು ನಿರೀಕ್ಷಿತ ಸಿನಿಮಾ ಆಗಿದೆ. ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿರೋ ಈ ಸಿನಿಮಾದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ. ಇದನ್ನ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕದ ಘೋಷಣೆ ಮಾಡಿಲ್ಲವಾದರೂ ಆದಷ್ಟೂ ಬೇಗ ಚಿತ್ರಮಂದಿರಕ್ಕೆ ಬರುವುದಾಗಿ ಹೇಳಿದ್ದಾರೆ.
ಫ್ಯಾನ್ಸ್ಈ ಸಿನಿಮಾದ ಟೀಸರ್ ನೋಡಿ ಫುಲ್ ಥ್ರಿಲ್ ಕೂಡ ಆಗಿದ್ದಾರೆ. ಬಹುಕೋಟ ವೆಚ್ಚದ ಈ ಚಿತ್ರದ ಟೀಸರ್ ಹೀಗಿದೆ ನೋಡಿ.