ಚಿತ್ರದುರ್ಗದಲ್ಲಿ ಬೀದಿಗಿಳಿದ ಕಿಚ್ಚ ಸುದೀಪ್ ಅಭಿಮಾನಿಗಳು

sudeep fans
sudeep fans
Published on

ಚಿತ್ರದುರ್ಗ: ನಟ ಕಿಚ್ಚ ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದರೊಂದಿಗೆ ಜಾತಿ ನಿಂದಿಸಿರುವ ನಟೇಶ್(ಅಹೋರಾತ್ರ)ಎಂಬುವರನ್ನು ಬಂಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್‌ಷಾ ಕಿಚ್ಚ ಸುದೀಪ್ ಸೇನೆ ನಗರದಲ್ಲಿ ಗುರುವಾರ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಳೆದೊಂದು ವರ್ಷದಿಂದ ನಟೇಶ್ ಎಂಬುವರು, ಫೇಸ್‌ಬುಕ್‌ನಲ್ಲಿ ಸುದೀಪ್ ಗೌರವಕ್ಕೆ ಧಕ್ಕೆ ತರುತ್ತಿರುವುದು ಲಕ್ಷಾಂತರ ಸುದೀಪ್ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಆದ್ದರಿಂದ ಮೇರು ನಟನ ತೇಜೋವಧೆ ನಡೆಸುತ್ತಿರುವ ನಟೇಶ್ ಎಂಬಾತನನ್ನು ಬಂಧಿಸ ಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಸೇನೆ ಕಾರ‌್ಯಕರ್ತರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಸೇನೆ ಜಿಲ್ಲಾಧ್ಯಕ್ಷ ಎಂ.ಅಜಯಕುಮಾರ್, ಪ್ರಮುಖರಾದ ಬಿ.ಟಿ.ರಾಜೇಂದ್ರ,ಯಶಸ್,ರಾಘುನಾಯಕ,ಸಿ.ಒ.ಮಂಜುನಾಥ್,ಜಿ.ಎಸ್.ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net