ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್​ !

sonu sood 1
Published on

ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧ ನಟ ಸೋನು ಸೂದ್​ ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ಚಾಚಿದ್ದಾರೆ. ಸೋನು ಸೂದ್​ ಚಾರಿಟಬಲ್​ ಟ್ರಸ್ಟ್​ ಸಿಬ್ಬಂದಿ ಮಂಗಳವಾರ ಬೆಂಗಳೂರು ಪೊಲೀಸ್​ ಇಲಾಖೆಗೆ ಆಕ್ಸಿಜನ್​ ಕಾನ್ಸನ್​ಟ್ರೇಟರ್​ ಯಂತ್ರ ಹಸ್ತಾಂತರಿಸಿದ್ದಾರೆ.

ನಗರ ಪೊಲೀಸ್​ ಆಯುಕ್ತರಿಗೆ ಆಕ್ಸಿಜನ್​ ಯಂತ್ರ ನೀಡಿದ ಸೋನು ಸೂದ್​ ಚಾರಿಟಬಲ್​ ಟ್ರಸ್ಟ್​ ಸದಸ್ಯರು ಈ ಕುರಿತು ಮಾಹಿತಿ ನೀಡಿ ತೆರಳಿದ್ದಾರೆ. ನೆರವಿನ ಹಸ್ತ ಚಾಚಿದ ಬಳಿಕ ವಿಡಿಯೋ ಕಾಲ್​ ಮೂಲಕ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರನ್ನು ಸಂಪಕಿರ್ಸಿ ಯಂತ್ರ ಪಡೆದುಕೊಳ್ಳಲು ಸೋನು ಸೂದ್​ ಮನವಿ ಮಾಡಿದರು. ವಿಡಿಯೋ ಕಾಲ್​ನಲ್ಲಿ ಧನ್ಯವಾದ ತಿಳಿಸಿದ ಪಂತ್​ ಯಂತ್ರವನ್ನು ಸ್ವೀಕರಿಸಿದರು.

ಆಕ್ಸಿಜನ್​ ಕಾನ್ಸನ್​ಟ್ರೇಟರ್​ ಯಂತ್ರವು ಆಕ್ಸಿಜನ್​ ಪೂರೈಸುವ ಯಂತ್ರವಾಗಿದೆ. ಕೊರೊನಾ ವಾರಿಯರ್ಸ್​ ಆಗಿರುವ ಪೊಲೀಸರು ಸೋಂಕಿಗೆ ತುತ್ತಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವಿಗೆ ಸೋನುಸೂದ್​ ಧಾವಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net