Shivarajkumar Health Update..ನನಗೆ ಅನಾರೋಗ್ಯ ಇದೆ...ನಾನು ಸುಳ್ಳು ಹೇಳಲ್ಲ...ಒಂದು ಸರ್ಜರಿ ನಡೆಯಬೇಕಿದೆ: ಶಿವರಾಜ್​ಕುಮಾರ್

shivarajkumar (FILEminimizer)
Published on

ಬೆಂಗಳೂರು: ( Shivarajkumar Health Update ) ಸ್ಯಾಂಡಲ್​ವುಡ್​​ ನಟ ಶಿವರಾಜ್​​ಕುಮಾರ್​ ಅವರು ಅನಾರೋದ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿಯೊಂದು  ಇತ್ತು. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಇರಲಿಲ್ಲ. ಆದ್ರೆ ಈ ಕುರಿತಾಗಿ ಶಿವರಾಜ್​ಕುಮಾರ್​ ಅವರೇ  ಯೂಟ್ಯೂಬ್​​ ಚಾಲನೆಗೆ ನೀಡಿದ ಸಂದರ್ಶನದಲ್ಲಿ  ಸ್ಪಷ್ಟನೆ ನೀಡಿದ್ದಾರೆ.

ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನಾನೂ ಮನುಷ್ಯನೇ. ಟ್ರೀಟ್​ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಟ್ರೀಟ್​ಮೆಂಟ್​ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ ಎಂದಿದ್ದಾರೆ.

‘ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್​ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ’ ಎಂದಿದ್ದಾರೆ.

ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ..ಆರೋಗ್ಯವಾಗಿ ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಆರೋಗ್ಯವಾಗಿ ಶಿವಣ್ಣ ಎಂದು ಫ್ಯಾನ್ಸ್​​ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net