ಉಡುಪಿ ಅಷ್ಟಮಿ ಸಂಭ್ರಮ ನಟ ರಕ್ಷಿತ್ ಶೆಟ್ಟಿ ಹುಲಿಕುಣಿತ!

Rakshith shetty
Published on

ಉಡುಪಿ: ಉಳಿದವರು ಕಂಡಂತೆ ಸಿನಿಮ ಮೂಲಕ ಹುಲಿವೇಷ ಕುಣಿತ ಕ್ರೇಜ್ ಹೆಚ್ಚಿಸಿದ್ದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಉಡುಪಿ ಅಷ್ಟಮಿ ಸಂಭ್ರಮದಲ್ಲಿ ಹುಲಿ ವೇಷ ಕುಣಿದು ಗಮನ ಸೆಳೆದಿದ್ದಾರೆ. ನಗರದಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ವಿಟ್ಲಪಿಂಡಿ ಉತ್ಸವ ಮನೆಮಾಡಿದ್ದು, ಮಂಗಳವಾರ ಬೈಲೂರು ಶ್ರೀ ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್‌ನ 13 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಲೋಬಾನ ಸೇವೆ ಸಂಪ್ರದಾಯದಲ್ಲಿ ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ದೈವಸ್ಥಾನದ ಹುಲಿವೇಷ ತಂಡದ ಯುವಕರ ಜತೆ ರಕ್ಷಿತ್ ಶೆಟ್ಟಿ ಹುಲಿ ಹೆಜ್ಜೆ ಹಾಕಿ ಕುಣಿದು, ಸಂಭ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net