

ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ಭಿನ್ನವಾಗಿದೆ. ಪನೋರಮಿಕ್ ಸನ್ರೂಫ್, 4 ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, 250 KMPH ಸ್ಪೀಡ್ ಹೀಗೆ ಸಾಕಷ್ಟು ಫೀಚರ್ಸ್ ಈ ಕಾರ್ನಲ್ಲಿದೆ.
ಒಂದು ಲೀಟರ್ ಪೆಟ್ರೋಲ್ಗೆ 14 ಕಿ.ಲೋವರೆಗೂ ಮೈಲೇಜ್ ನೀಡುತ್ತದೆ. ಇನ್ನು ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿರುತ್ತದೆ. 8 ಏರ್ಬ್ಯಾಗ್ಸ್ ಸೇರಿದಂತೆ ಸಾಕಷ್ಟು ಸುರಕ್ಷತೆ ಕಾರ್ನಲ್ಲಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವ ಆಡಿ ಕ್ಯೂ7 ಕಾರಿನ ಆನ್ರೋಡ್ ಬೆಲೆ 1 ಕೋಟಿ 10 ಲಕ್ಷ ರೂ.ವರೆಗೂ ಆಗುತ್ತದೆ
ಅಪ್ಪುಗೂ ಕಾರ್, ಬೈಕ್ ಕ್ರೇಜ್ ಜಾಸ್ತಿ ಇತ್ತು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್ನಲ್ಲಿ ಇವೆ. ಆ ಪಟ್ಟಿಗೆ ಇದೀಗ ಆಡಿಕ್ಯೂ 7 ಕಾರು ಸೇರಿಕೊಂಡಿದೆ. 2019ರಲ್ಲಿ ಪತ್ನಿಗೆ ಪುನೀತ್ ರಾಜ್ಕುಮಾರ್ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದು ಭಾರೀ ಸುದ್ದಿ ಆಗಿತ್ತು. ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ನೀಲಿ ಬಣ್ಣದ ಕಾರು ಅದಾಗಿತ್ತು.