ಮೈಸೂರಿನಲ್ಲಿ ನಟ ಪುನೀತ್ ಪುಣ್ಯ ಸ್ಮರಣೆ

27
Published on

ಮೈಸೂರು: ವಿನಾಯಕ ನಗರದಲ್ಲಿ (ಪಡುವಾರಹಳ್ಳಿ) ಮಂಗಳವಾರ ನಟ ಪುನೀತ್ ರಾಜ್‌ಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೈಸೂರು ಒಕ್ಕಲಿಗರ ಸಂಘದ ನಿರ್ದೇಶಕ ರವಿ, ನಮ್ಮ ಕನ್ನಡ ಚಿತ್ರ ರಂಗದ ಅಚ್ಚು ಮೆಚ್ಚಿನ ನಾಯಕ ನಟ, ಕನ್ನಡಿಗರೆಂದು ಮರೆಯಲಾಗದ ಮಾಣಿಕ್ಯ. ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ್ನ ಮೂರೂ ವರ್ಷವಾದರೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖಂಡರಾದ ಸೋಮು, ಸುರೇಶ್‌ಕುಮಾರ್, ಮಂಜುನಾಥ್, ವಿಶ್ವನಾಥ್, ಶಿವಕುಮಾರ್, ಶ್ರೀಧರ್, ಮಹಾದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net