ಯುವರತ್ನ ನೋಡಲು ಅಭಿಮಾನಿಗಳ ದಂಡು: ಹೊಸಪೇಟೆಯ ಎರಡು ಥಿಯೇಟರ್ ಹೌಸ್‌ಫುಲ್

Hospet Yuvaratna Film
ಯುವರತ್ನ ಚಿತ್ರ ವೀಕ್ಷಣೆಗಾಗಿ ಹೊಸಪೇಟೆಯ ಮೀರ್ ಅಲಾಂ ಚಿತ್ರಮಂದಿರದಲಿ ಟಿಕೆಟ್ ಪಡೆಯುತ್ತಿರುವ ಪುನೀತ್ ಅಭಿಮಾನಿಗಳು.
Published on

ಹೊಸಪೇಟೆ: ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು, ನಗರದ ಎರಡು ಚಿತ್ರಮಂದಿರಗಳ ಬಳಿ ಅಭಿಮಾನಿಗಳ ದಂಡೇ ನೆರೆದಿದತ್ತು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ನಗರದ ಮೀರ್ ಅಲಾಂ ಮತ್ತು ಬಾಲ ಚಿತ್ರಮಂದಿರಗಳಲ್ಲಿ ಬೆಳಗ್ಗೆ 5 ಗಂಟೆಗೆ ಮೊದಲ ಶೋ ಆರಂಭಿಸಲಾಗಿತ್ತು. ಬುಧವಾರ ರಾತ್ರಿಯಿಂದಲೇ ಅಭಿಮಾನಿಗಳು ಥಿಯೇಟರ್‌ಗಳತ್ತ ಬರುತ್ತಿದ್ದರು. ಮೊದಲ ಶೋ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಸರದಿಯಲ್ಲಿ ನಿಂತು ಟಿಕೆಟ್ ಪಡೆದರು. 5 ಗಂಟೆ ಆಗುತ್ತಿದ್ದಂತೆ ಪರದೆ ಮೇಲೆ ‘ಯುವರತ್ನ’ ಟೈಟಲ್ ಹಾಗೂ ಪುನೀತ್ ರಾಜಕುಮಾರ್ ಹೆಸರು ಬೀಳುತ್ತಿದ್ದಂತೆ ಅಭಿಮಾನಿಗಳು ಕೇಕೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net