ವೋಟ್ ಪಡೆದು ರೈತರ ಕುತ್ತಿಗೆ ಕುಯ್ಯುವ ಕೆಲಸ: ಚಿತ್ರನಟ ಜೋಗಿ ಪ್ರೇಮ್ ಬೇಸರ

Actor Prem supports Cauvery protest
Published on

ಮಂಡ್ಯ: ವೋಟ್ ಪಡೆದು ರೈತರ ಕುತ್ತಿಗೆ ಕುಯ್ಯುವ ಕೆಲಸ ಆಗುತ್ತಿದೆ ಎಂದು ನಟ ಜೋಗಿ ಪ್ರೇಮ್ ಬೇಸರ ವ್ಯಕ್ತಪಡಿಸಿದರು.

ಕಾವೇರಿ ಹೋರಾಟ ಬೆಂಬಲಿಸಿ ಶುಕ್ರವಾರ ನಗರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಸರ್‌ಎಂವಿ ಪ್ರತಿಮೆವರೆಗೆ ಪಾದಯಾತ್ರೆ ನಡೆಸಿ ಮಾತನಾಡಿದರು. ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇನೆ.ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡಿಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಾರೆ ಎಂದರು.

ಮಂಡ್ಯ ಜನರು ಬೆಂಗಳೂರಿಗೆ ನೀರು ಕೊಡುತ್ತಾರೆ. ಯಾವುದೇ ಪಕ್ಷ ಯಾರೇ ಸಿಎಂ ಆದರೂ ರಾಜಕಾರಣ ಮಾಡುತ್ತಾರೆ. ಬಂಗಾರಪ್ಪ ಅವರು ಬಿಟ್ಟಿಲ್ಲ, ಇವರು ಬಿಡಬಾರದಿತ್ತು. ಎಂಪಿ ಚುನಾವಣೆ ಬರುತ್ತಿದೆ, ಈಗ ರಾಜಕೀಯ ಮಾಡುತ್ತಾರೆ. ರೈತರ ಜತೆ ನಾವು ಸದಾ ಇರುತ್ತೇವೆ. ಮಂಡ್ಯ ಜನರನ್ನ ಹೊಗಳಿ ವೋಟ್ ಪಡೆದು ಅವರ ಕುತ್ತಿಗೆ ಕುಯುವ ಕೆಲಸ ಮಾಡುತ್ತಾರೆ. ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿಬೇಕು ಎಂದು ಒತ್ತಾಯಿಸಿದರು.

ನಟ ದರ್ಶನ್ ಎಲ್ಲಿದ್ದರೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಇರುತ್ತಾರೆ. ಅವರು ಒಳ್ಳೆಯ ಗುಣ ಇರುವ ವ್ಯಕ್ತಿ. ಆದ್ದರಿಂದ ಅವರ ಬಗ್ಗೆ ಯಾರು ಸಹ ಕೆಟ್ಟದಾಗಿ ಮಾತನಾಡಬೇಡಿ. ಕಾವೇರಿ ನೀರು ಎಂದರೆ ಸದಾ ಅವರು ಮುಂದೆ. ಅದರಲ್ಲೂ ಮಂಡ್ಯ ವಿಷಯವೆಂದರೆ ನಮ್ಮೆಲ್ಲರಿಗೂ ಹೋರಾಟ ಮಾಡಲು ಹೇಳುವ ವ್ಯಕ್ತಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net