

ಮೈಸೂರು: ನಟ ಪ್ರಭುದೇವ ಅವರ ಅಜ್ಜಿ ವಯೋಸಹಜ ಕಾರಣಗಳಿಂದ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಪ್ರಭುದೇವ ಹಾಗೂ ಸಹೋದರ ನಾಗೇಂದ್ರ ಆಗಮಿಸಿದ್ದಾರೆ.
ಪುಟ್ಟಮ್ಮಣ್ಣಿ (96) ನಿಧನರಾಗಿದ್ದಾರೆ. ಪ್ರಭುದೇವ ತಾಯಿ ಅವರ ತಾಯಿ ಪುಟ್ಟಮ್ಮಣ್ಣಿ ನಂಜನಗೂಡು ತಾಲ್ಲೂಕಿನ ದೂರ ಗ್ರಾಮದಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅಜ್ಜಿಯ ಅಂತಿಮ ದರ್ಶನ ಪಡೆಯಲು ಪ್ರಭುದೇವ ಅವರು ಚೆನ್ನೈ ನಿಂದ ಮೈಸೂರಿಗೆ ಆಗಮಿಸಿದ್ದಾರೆ.
ಪ್ರಭುದೇವ ಸಹೋದರ ಕಾರಿನ ಮೂಲಕ ದೂರ ಗ್ರಾಮಕ್ಕೆ ತೆರಳಿದ್ದಾರೆ. ಇಂದು ಸಂಜೆ ಪುಟ್ಟಮ್ಮಣ್ಣಿಯವರ ಅಂತ್ಯಕ್ರಿಯೆ ನೆರವೇರಲಿದೆ.
ಹಿರಿಯ ನೃತ್ಯ ಸಂಯೋಜಕ ಮೂಗೂರು ಸುಂದರಂ ಅವರು ಮೂಲತಃ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದವರು. ಅವರು ದೂರ ಗ್ರಾಮದ ವೈಸ್ ಚೇರ್ಮನ್ ಮಹದೇವಪ್ಪ ಮತ್ತು ಪುಟ್ಟಮ್ಮಣ್ಣಿ ಅವರ ಮಗಳು ಮಹದೇವಮ್ಮ ಅವರನ್ನು ವಿವಾಹವಾಗಿದ್ದರು. ನಂತರ ಚಿತ್ರರಂಗದಲ್ಲಿ ಯಶಸ್ಸು ಕಂಡು ಚೆನ್ನೈನಲ್ಲಿ ನೆಲೆಸಿದ್ದರು. ಅವರಿಗೆ ರಾಜು, ಪ್ರಭುದೇವ, ನಾಗೇಂದ್ರ ಸೇರಿ ಮೂವರು ಪುತ್ರರಿದ್ದಾರೆ.