

ಮಂಡ್ಯ: ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಭಾವಿ ಪತ್ನಿ ರೇವತಿ ಜತೆ ಶಾಪಿಂಗ್ ಮಾಡುತ್ತಿಲ್ಲ ಎಂದು ಯುವ ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸದ್ಯ ನಾನು ಸಿನಿಮಾ ಮಾಡುತ್ತಿದ್ದೇನೆ. ಏಪ್ರಿಲ್ 10 ರ ವರೆಗೆ ಸಿನಿಮಾ ಶೂಟಿಂಗ್ ಇದೆ. ಭಾವಿ ಪತ್ನಿ ಜತೆ ಶಾಪಿಂಗ್ ಇಲ್ಲ. ಶೂಟಿಂಗ್ ಮುಗಿಸಿದ ಬಳಿಕ ಭೇಟಿಯಾಗುತ್ತೇವೆ ಅಷ್ಟೇ. ವಿಶೇಷವಾಗಿ ಶಾಪಿಂಗ್ ಅಂತಾ ಏನು ಇಲ್ಲ ಎಂದರು.
ಮನೆಯವರೆಲ್ಲಾ ಸೇರಿ ಮದುವೆ ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಮದುವೆಯ ಸಿದ್ಧತೆ ನನ್ನ ತಂದೆ ಹಾಗೂ ತಾಯಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದಷ್ಟು ಬೇಗಾ ಸಿನಿಮಾ ಮಾಡಬೇಕು ಎಂದು ನಾನು ಅಂದುಕೊಂಡಿದ್ದೇನೆ. ಮುಂದಿನಗಳಲ್ಲಿ ನಾನೇ ಖುದ್ದಾಗಿ ಬಂದು ಆಹ್ವಾನ ಪತ್ರಿಕೆ ನೀಡುತ್ತೇನೆ.
ನಮ್ಮನ್ನು ಪ್ರೀತಿಸುವ ಜನ ಮಂಡ್ಯ ಭಾಗದಲ್ಲಿ ಹೆಚ್ಚಿದ್ದಾರೆ. ನನ್ನ ಮದುವೆಯಲ್ಲಿ ಎಲ್ಲರೂ ಬಂದು ಆಶೀರ್ವಾದ ಮಾಡಬೇಕು. ಜೊತೆಯಲ್ಲಿ ಊಟ ಮಾಡಬೇಕು ಎನ್ನುವುದು ನನ್ನ ಆಶಯ ಎಂದರು.
ಕೆಆರ್‌ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ: ಕೆಆರ್ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ದೊಡ್ಡಗೌಡರು ಅಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ರಾಜಕೀಯ ಮಾಡಲಿ ಆದರೆ ದ್ವೇಷದ ರಾಜಕೀಯ ಮಾಡಬಾರದು. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾವು ನಿಲ್ಲುತ್ತೇನೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್)