ಇಂಗ್ಲಿಷ್ ಭಾಷೆ ಶ್ರೇಷ್ಠ ಎಂಬ ಭ್ರಮೆ ಬೇಡ

11 Dwd 4
Published on

ಧಾರವಾಡ: ಭಾವನೆಗಳನ್ನು ವ್ಯಕ್ತಪಡಿಸಲು ನಮಗಿರುವ ಏಕೈಕ ಭಾಷೆ ಕನ್ನಡ. ಆದರೆ, ನಾವು ಇಂಗ್ಲಿಷ್ ಭಾಷೆ ಶ್ರೇಷ್ಠ ಎಂಬ ಭ್ರಮೆಯಲ್ಲಿದ್ದೇವೆ. ಇಂಗ್ಲಿಸ್ ಕರಾರುಗಳನ್ನು ಬರೆಯುವ ಭಾಷೆ ಆಗಿದ್ದರೆ, ಕನ್ನಡ ಭಾವಗಳನ್ನು ವ್ಯಕ್ತಪಡಿಸುವ ಭಾಷೆ ಎಂದು ಹಿರಿಯ ನಟ, ರಂಗಕರ್ಮಿ ಎಸ್.ಎನ್. ಸೇತುರಾಮ್ ಹೇಳಿದರು.
ನಗರದ ಮದೀನಾ ಪಿಯು ವಿe್ಞÁನ ಕಾಲೇಜ್ ಸಹಯೋಗದಲ್ಲಿರುವ ವಿಜೇತಾ ಪಿಯು ಕಾಲೇಜ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ೨೦೨೩- ೨೪ನೇ ಸಾಲಿನ ಪ್ರಥಮ ವರ್ಷದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುಚಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಕಡೆಯ ವಿದ್ಯಾರ್ಥಿಗಳು ನೆಲಕ್ಕೆ ಹತ್ತಿರುವ ಜೀವಿಗಳು. ಅಂಥವರಿಗೆ ಧೈರ್ಯ ಮತ್ತು ಸ್ಥಿರತೆ ಹೆಚ್ಚು. ಹೀಗಾಗಿ ಇಲ್ಲಿನ ವಿದ್ಯಾರ್ಥಿ ಬೇರುಗಳು ಗಟ್ಟಿಯಾಗಿವೆ. ಇಂಗ್ಲಿಷ್‌ನಲ್ಲಿ ೫ ಸ್ವರಗಳಿದ್ದರೆ ಕನ್ನಡದಲ್ಲಿ ಹೆಚ್ಚು. ಹೀಗಾಗಿ ಇಂಗ್ಲಿಷ್ ವ್ಯವಹಾರಿಕ ಭಾಷೆ. ಕನ್ನಡ ಭಾವನಾತ್ಮಕ ಭಾಷೆ. ಹಾಗಾಗಿ ಹೆಚ್ಚೆಚ್ಚು ಸಾಧಕರು ಕನ್ನಡದಿಂದ ಬಂದವರಾಗಿದ್ದಾರೆ ಎಂದರು.
ಬ್ರಿಟಿಷರು ತೋರಿಸಿದ್ದ ನಾಗರಿಕೆತೆಯ ಭ್ರಮೆಯಲ್ಲಿದ್ದೇವೆ. ನಮ್ಮ ದೇಶದಲ್ಲಿ ಲೂಟಿ ಮಾಡಿದವರಿಗೆ ವಿದೇಶಿಗರು ಆಶ್ರಯ ಕೊಟ್ಟಿz್ದÁರೆ. ಅಂಥÀವರ ನಾಗರಿಕತೆ ನಮಗೆ ಬೇಕಾ? ವಿದ್ಯಾರ್ಥಿಗಳು ನಮ್ಮತನ, ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಮರೆಯಬಾರದು ಎಂದರು.
ಕಾಲೇಜ್ ಪ್ರಾಚಾರ್ಯ ಎಂ.ವಿ. ಹಡಪದ ಅಧ್ಯಕ್ಷತೆ ವಹಿಸಿದ್ದರು. ಮದೀನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೈಸರಖಾನ್ ದಾಸನಕೊಪ್ಪ, ವಿಜೇತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಮೇಶ ಪರೀಟ, ವೆಂಕಟೇಶ ಲಕ್ಷಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net