ಅಂಧ ಗಾಯಕಿ ಸಹೋದರಿಯರಿಗೆ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ ನಟ ಜಗ್ಗೇಶ್​

Jaggesh
Published on

ಬೆಂಗಳೂರು: ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಸಿರುವ ಅಂಧ ಗಾಯಕಿ ಸಹೋದರಿಯರಿಗೆ ನಟ ಜಗ್ಗೇಶ್​ ನೆರವು ನೀಡಲು ಮುಂದೆ ಬಂದಿದ್ದಾರೆ.

ಮಧುಗಿರಿ ಮೂಲದ ರತ್ನಮ್ಮ ಹಾಗೂ ಮಂಜಮ್ಮ ಸಹೋದರಿಯರು ಸಣ್ಣ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮನೆ ಕಟ್ಟಿಕೊಡುವುದಾಗಿ ನಟ ಜಗ್ಗೇಶ್​ ಇನ್​ಸ್ಟಾಗ್ರಾಮ್​ನಲ್ಲಿ ಭರವಸೆ ನೀಡಿದ್ದಾರೆ.

ಅಪ್ಪ, ಅಮ್ಮ ಹಾಗೂ ಸಹೋದರನನ್ನು ಕಳೆದುಕೊಂಡ ಅಂಧ ಸಹೋದರಿಯರು ಅಜ್ಜಿಯೊಂದಿಗೆ ವಾಸ ಮಾಡುತ್ತಿದ್ದಾರೆ. ಮಧುಗಿರಿ ದೇವಾಲಯದಲ್ಲಿ ಹಾಡು ಹೇಳಿ ಬಂದ ಹಣದಿಂದ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ಇವರ ಅಸಹಾಯಕತೆ ನೋಡಿದ ನಟ ಜಗ್ಗೇಶ್​ ಸಹೋದರಿಯರ ನೆರವಿಗೆ ಧಾವಿಸಿದರು.

ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅಂಧ ಸಹೋದರಿಯರ ಕುಟುಂಬಕ್ಕೆ ಪ್ರತಿ ತಿಂಗಳು ಪಡಿತರ ನೀಡುವುದಾಗಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net