ಕೊಲ್ಲೂರಲ್ಲಿ ಸರಳವಾಗಿ ವಿವಾಹವಾದ ಚಿತ್ರನಟ...

Gs2
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಚಿತ್ರನಟ ಹಾಗೂ ನಿರ್ಮಾಪಕ ಗೌರಿಶಂಕರ್​ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಸರಳವಾಗಿ ವಿವಾಹವಾಗಿದ್ದಾರೆ.

ಶಿವಮೊಗ್ಗ ಮೂಲದ ಅರುಣಾ ಅವರನ್ನು ವರಿಸಿರುವ ಅವರ ಈ ಮದುವೆಗೆ ಕೋವಿಡ್​-19 ಹಿನ್ನೆಲೆಯಲ್ಲಿ ಇಪ್ಪತ್ತು ಜನರಿಗಷ್ಟೇ ಆಹ್ವಾನ ನೀಡಲಾಗಿತ್ತು. ಉಭಯ ಕುಟುಂಬಸ್ಥರು ಹಾಗೂ ಅತ್ಯಾಪ್ತರಷ್ಟೇ ಉಪಸ್ಥಿತರಿದ್ದ ಈ ಮದುವೆ ಸರಳವಾಗಿ ನೆರವೇರಿತು.

ಗೌರಿಶಂಕರ್​ 'ರಾಜಹಂಸ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದರು. ಅರುಣಾ ಬೆಂಗಳೂರಿನಲ್ಲಿ ಫ್ಯಾಷನ್​ ಡಿಸೈನರ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net