ನಟ ಧನ್ವೀರ್ ನಟನೆಯ ಹಯಗ್ರೀವ ಚಿತ್ರೀಕರಣ 8ರಿಂದ ಆರಂಭ

9
Published on

ಮೈಸೂರು: ನಟ ಧನ್ವೀರ್ ನಾಯಕರಾಗಿ ನಟಿಸುತ್ತಿರುವ ‘ಹಯಗ್ರೀವ’ ಸಿನಿಮಾದ ಮುಹೂರ್ತ ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದಿದ್ದು, ಫೆ.8ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಿಳಿಸಿದರು.

ಓ.ಆರ್.ರಘುಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅವರು ಈಗಾಗಲೇ ‘ದಿ ಬೆಲ್’ ಎಂಬ ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ತಂಡ ಎಂಟು ತಿಂಗಳು ಕೆಲಸ ಮಾಡಿ ನಟ ಧನ್ವೀರ್ ಅವರಿಗಾಗಿ ಕಥೆ ರಚಿಸಿದ್ದಾರೆ. ಇದೊಂದು ಸೃಷ್ಟಿಗೆ ವಿರುದ್ಧವಾಗಿ ನಡೆಯುವ ವ್ಯಕ್ತಿಯ ಸ್ಥಿತಿಯ ಕುರಿತ ಕಥಾ ಹಂದರವುಳ್ಳ ಸಿನಿಮಾವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ಹಾಡನ್ನು ವಿಯೆಟ್ನಾಂನಲ್ಲಿ ಚಿತ್ರೀಕರಿಸುವ ಬಗ್ಗೆ ಯೋಚನೆಯಿದೆ. ಚಿತ್ರದಲ್ಲಿ ಇನ್ನೊಬ್ಬ ನಾಯಕ ನಟನಿದ್ದು, ಸಿನಿಮಾ ಬಿಡುಗಡೆಯವರೆಗೆ ಅವರ ಬಗ್ಗೆ ತಿಳಿಸುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net