ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ

Darshan in dharwad
Darshan in dharwad
Published on

ಧಾರವಾಡ: ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಅವರು ಸೋಮವಾರ ಭೇಟಿ ನೀಡಿದರು.

ಈ ವೇಳೆ ವಿನಯ್ ಕುಲಕರ್ಣಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ದರ್ಶನ್, ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಆರೋಗ್ಯ ವಿಚಾರಿಸಿದರು. ಈ ವೇಳೆ ವಿನಯ್ ಅವರ ಮಕ್ಕಳು ಹಾಗೂ ಅವರ ಅಕ್ಕ ಇದ್ದರು. ನಟ ದರ್ಶನ್ ಹಾಗೂ ವಿನಯ ಕುಲಕರ್ಣಿ ಬಹುಕಾಲದ ಸ್ನೇಹಿತರಾಗಿದ್ದಾರೆ. ಕಳೆದ ವರ್ಷ ದರ್ಶನ್ ಧಾರವಾಡಕ್ಕೆ ಭೇಟಿ ನೀಡಿದ್ದಾಗ ವಿನಯ್ ಅವರ ಜೊತೆ ಚಕ್ಕಡಿ ಏರಿ ಸಂಭ್ರಮಪಟ್ಟಿದ್ದರು.

2016 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗಿಶಗೌಡ ಗೌಡರ ಕೊಲೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ, ಕೊಲೆಗೆ ಸಂಚು ಹಾಗೂ ಸಾಕ್ಷ್ಯನಾಶ ಪ್ರಕರಣದಡಿ ವಿನಯ ಕುಲಕರ್ಣಿಯನ್ನು ಬಂಧಿಸಿ, ನ್ಯಾಯಾಂಗ ಬಂಧನದಡಿ ಜೈಲಿಗೆ ಕಳುಹಿಸಿದೆ. ಸದ್ಯ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ. (ವಿಜಯವಾಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net