ಅವಕಾಶಕ್ಕಾಗಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಕೋಟಿ.. ಕೋಟಿ ಆಸ್ತಿ ಒಡೆಯ; ಡಿ ಬಾಸ್​ ಬಳಿಯಿರುವ ಆಸ್ತಿ ಮೌಲ್ಯ ಹೇಳಿದ್ರೆ ಶಾಕ್​ ಆಗೋದು ಪಕ್ಕಾ..

Darshan-3
Published on

ಬೆಂಗಳೂರು: ರೇಣುಕಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಮರ್ಡರ್ ಮಾಡಿದ ಆರೋಪದ ಮೇಲೆ ದರ್ಶನ್ ಹಾಗೂ ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದರ್ಶನ್​ ಅವರ ಜೀವನದ ಕುರಿತಾಗಿ ಕೆಲವು ವಿಚಾರಗಳು ಸೋಶಿಯಲ್​​ ಮೀಡಿಯಾದಲ್ಲಿ ಬರೆಯಲಾಗಿದೆ.

ದರ್ಶನ್ ತೂಗುದೀಪ ಹುಟ್ಟಿದ್ದು 1977 ಫೆಬ್ರವರಿ 16. ಸ್ಯಾಂಡಲ್​​ವುಡ್​​ನ ಡಿ ಬಾಸ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ, ನಿರ್ಮಾಪಕ ಮತ್ತು ವಿತರಕ. ದರ್ಶನ್  ತೂಗುದೀ ಭಾರತೀಯ ಚಿತ್ರೋದ್ಯಮದ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು,  ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು ೧೯೯೦ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು.  ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ೨೦೦೧ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಿದ್ದರು.

ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ದರ್ಶನ್ ತಾಯಿ ಹೆಸರು ಮೀನಾ ಮತ್ತು ತಂದೆ ತೂಗುದೀಪ ಶ್ರೀನಿವಾಸ್. ಇವರು ಖ್ಯಾತ ನಟ ಕೂಡ ಹೌದು. ಇನ್ನು ದರ್ಶನ್ ಅವರಿಗೆ ದಿವ್ಯಾ ಎಂಬ ಸಹೋದರಿ ಮತ್ತು ದಿನಕರ್ ತೂಗುದೀಪ ಎಂಬ ಸಹೋದರ ಇದ್ದಾರೆ. 2000ರಲ್ಲಿ ದರ್ಶನ್ ವಿಜಯಲಕ್ಷ್ಮಿ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ ವಿನೀಶ್ ಎಂಬ ಮಗನಿದ್ದಾನೆ.

ದರ್ಶನ್ 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಿಸಿದ್ದರು. ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ದರ್ಶನ್, 2002ರಲ್ಲಿ ತೆರೆಕಂಡ ಚಲನಚಿತ್ರ ಮೆಜೆಸ್ಟಿಕ್ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಯಜಮಾನ (2019), ರಾಬರ್ಟ್ (2021), ಕಾಟೇರ (2023), ಗಜ (2008), ನವಗ್ರಹ (2008), ಸಾರಥಿ (2011), ಬುಲ್ ಬುಲ್ (2013), ಕರಿಯಾ (2003) ಹೀಗೆ ಅನೇಕ ಹಿಟ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ.

ದರ್ಶನ್ ಅವರಿಗೆ ಸಿನಿಮಾ ಜತೆಗೆ ಕೃಷಿ ಬಹಳ ಅಚ್ಚುಮೆಚ್ಚು. ಅವರು ಪಾರ್ಮ್ ಹೌಸ್‌ನಲ್ಲಿ ಹಸು, ಕುದುರೆ ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆ ಅವರೆ ಕುದ್ದು ಮಾಡುತ್ತಾರೆ. ಇತ್ತೀಚಿಗೆ ಅವರು ಸುಮಾರು 50 ಎಕರೆ ಜಮೀನಿನಲ್ಲಿ ಅಧಿಕ ಲಾಭ ತರುವ ನಾಟಿ ಅಡಿಕೆ ತಳಿಯ ತೋಟ ಮಾಡಿದ್ದಾರೆ. ಇತ್ತೀಚೆಗೆ ಅಧಿಕ ಸಮಯ ಇದೇ ತೋಟದಲ್ಲಿ ಕಳೆಯುತ್ತಾರೆ. ದರ್ಶನ್ ತೂಗುದೀಪ್ ಅವರು ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, $ 12 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವರದಿಯೊಂದರ ಪ್ರಕಾರ, 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು ಮೈಸೂರನಲ್ಲಿ ಫಾರ್ಮ್‌ ಹೌಸ್‌ ಹೊಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಹಲವೆಡೆ ಜಮೀನು ಹಾಗೂ ಹೂಡಿಕೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಚುಗಳ ಕಲೆಕ್ಷನ್‌ಮ ಕಾರು ಹೊಂದಿದ್ದಾರೆ ಎನ್ನಲಾಗಿದೆ.

ಬಿಳಿ ಬಣ್ಣದ ಲಂಬೋರ್ಗಿನಿ ಕಾರ್‌, ಪೋರ್ಶೆ, ಥಾರ್‌, ಫೋರ್ಡ್‌ ಎಂಡವಿಯರ್‌ ಇದರ ಬೆಲೆ ಮೂವತ್ತಾರು ಲಕ್ಷ ರೂಪಾಯಿ. ಇದಲ್ಲದೆ ಮಿನಿ ಕೂಪರ್‌ ಕಾರು ಹೊಂದಿದ್ದಾರೆ ಇದರ ಬೆಲೆ 47 ಲಕ್ಷ ಎನ್ನಲಾಗಿದೆ. ಅಲ್ಲದೆ 50 ಲಕ್ಷ ರೂಪಾಯಿಯ ಟೊಯೋಟ ಫಾರ್ಚುನರ್‌ ಕಾರ್‌, ಬಿಎಂಡ್ಲೂ 520 ಡಿ ಕಾರು 65 ಲಕ್ಷ ರೂಪಾಯಿ, ಇದರೊಂದಿಗೆ 1 ಕೋಟಿ 16 ಲಕ್ಷದ ಮೌಲ್ಯದ ಆಡಿ ಕಾರು, ಜಾಗ್ವಾರ್‌ ಎಕ್ಸ್‌ ಕೆ ಕಾರು ಇದರ ಬೆಲೆ 1.2 ಕೋಟಿ, ಟೊಯೋಟಾ ವೆಲ್ಫೋರ್‌ ಇದರ ಬೆಲೆ 1.2 ಕೋಟಿ, ಇಲ್ಲದೆ ರೇಂಜ್‌ ರೋವರ್‌ ವೋಗ್‌ ಇದರ ಬೆಲೆ 2.64 ಕೋಟಿ. ಇದಲ್ಲದೆ ರೇಂಜ್‌ ರೋವರ್‌ ಡಿಫೆಂಡ್‌ ಇದರ ಬೆಲೆ 2.3 ಕೋಟಿ, ಲ್ಯಾಂಬೋರ್ಗಿನಿ ಹುರುಸ್‌ ಕಾರು 4.18 ಕೋಟಿ. ಲ್ಯಾಂಬೋರ್ಗಿನಿ ಅವೆಂಡರ್‌ ಎಸ್‌ 5 ಕೋಟಿ ಮೌಲ್ಯದ ಕಾರನ್ನು ಹೊಂದಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ.

ಏನಿದು ಪ್ರಕರಣ?

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.

ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net