ದಿಢೀರಾಗಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ನಟ ದರ್ಶನ್

Actor Darshan who got darshan of Shri Chamundeshwari
Published on

ಮೈಸೂರು: ನಟ ದರ್ಶನ್ ಬುಧವಾರ ಸಂಜೆ ದಿಢೀರಾಗಿ ನಗರದ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಜಾಮೀನು ವಿಚಾರ ಇದೀಗ ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಸಂದರ್ಭದಲ್ಲಿ ದಿಢೀರಾಗಿ ದರ್ಶನ್ ದೇವಿಯ ಮೊರೆ ಹೋಗಿದ್ದಾರೆ. ಆಷಾಢ ಶುಕ್ರವಾರ ಸಂದರ್ಭ ದರ್ಶನ್ ಕುಟುಂಬ ಸಹಿತರಾಗಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು. ಇದೀಗ ಏಕಾಂಗಿಯಾಗಿ ಅವರು ಆಗಮಿಸಿದರು.

ದರ್ಶನ್ ಆಗಮಿಸುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ದೇವಸ್ಥಾನದಲ್ಲಿ ನೆರೆದು ಅವರನ್ನು ಸುತ್ತುವರೆದು ಘೋಷಣೆಗಳನ್ನು ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net