

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಸಿನಿ ಜರ್ನಿಯಲ್ಲಿ 25 ವರ್ಷ ಪೂರೈಸಿದ್ದಾರೆ. ಕಾಟೇರ ಕೂಡ ಬಿಗ್ ಸಕ್ಸಸ್ ಆಗಿದೆ. ಈ ಎಲ್ಲಾ ಸಂತೋಷದಲ್ಲಿರುವ ದಾಸನ ಖುಷಿಗೆ ಈಗ ಮತ್ತೊಂದು ಖುಷಿ ಸಂಗತಿ ಸೇರ್ಪಡೆಯಾಗಿದೆ.
ಫೆಬ್ರವರಿ-21 ರಂದು ರಾತ್ರಿ ದರ್ಶನ್ ಆ್ಯಂಡ್ ಡೈರೆಕ್ಟರ್ ತರುಣ್ ಒಂದು ಇವೆಂಟ್ ಹೋಗಿದ್ದರು. ಈ ಇವೆಂಟ್ ರಾಮನಗರದಲ್ಲಿಯೇ ಇತ್ತು. ದರ್ಶನ್ ಆತ್ಮೀಯ ವಿನಯ್ ಇಲ್ಲಿ ಒಂದು ವಿಶೇಷ ಗಿಫ್ಟ್ ರೆಡಿ ಮಾಡಿದ್ದರು.
ಡಿ ಬಾಸ್ಗೆ ಆಪ್ತರಾದ ವಿನಯ್ ಅವರು ಚಾಕಲೇಟ್‌ನಿಂದ ದರ್ಶನ್ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್ ಖುಷಿಪಟ್ಟಿದ್ದಾರೆ.
ದರ್ಶನ್ ಅವರ ಪ್ರತಿಮೆ ವಿಶೇಷತೆ: ಚಾಕಲೇಟ್‌ನಿಂದ ದರ್ಶನ್ ಅವರ ಪ್ರತಿಮೆ ಮಾಡಲಾಗಿದೆ. ಪ್ರತಿಮೆ 6.2 ಅಡಿ ಎತ್ತರ ಇದೆ. ಇದರ ತೂಕ ಬರೋಬ್ಬರಿ 250 ಕೆಜಿ. ರಾಮನಗರದಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.