

ಮಂಡ್ಯ: ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನವನ್ನು ಅಭಿಮಾನಿ ಓಂಕಾರ್ ವಿಶಿಷ್ಟವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ನಗರದ ವಿಕಸನ ಸಂಸ್ಥೆಯ ಆಶ್ರಯದಲ್ಲಿರುವ ಮಕ್ಕಳಿಗೆ ಉಚಿತವಾಗಿ ಹೇರ್ ಕಟ್ಟಿಂಗ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದರು.
ಈ ಸಂಸ್ಥೆಯಲ್ಲಿ ಪಾಲಕರಿಂದ ದೂರವಾದ ಮಕ್ಕಳು ಆಶ್ರಯ ಪಡೆದಿದ್ದಾರೆ. ಸಂಸ್ಥೆಯಲ್ಲಿರುವ 30ಕ್ಕೂ ಹೆಚ್ಚು ಮಕ್ಕಳಿಗೆ ಹೊದಿಕೆ ಕೂಡ ವಿತರಿಸಲಾಯಿತು. ಸಂಸ್ಥೆಯಲ್ಲಿರುವ ಮಕ್ಕಳು ಕೇಕ್ ಕತ್ತರಿಸಿ ದರ್ಶನ್ಗೆ ಒಳ್ಳೆಯದಾಗಲಿ ಎಂದು ಅರಸಿದರು.
ಮೂಲತಃ ಆಂಧ್ರಪ್ರದೇಶದವರಾದ ಓಂಕಾರ್, ಹಲವು ವರ್ಷಗಳಿಂದ ನಗರದಲ್ಲಿ ಕಟ್ಟಿಂಗ್ ಸೆಲೂನ್ ನಡೆಸುತ್ತಿದ್ದಾರೆ. ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು ಪ್ರತಿ ವರ್ಷ ದರ್ಶನ್ ಜನ್ಮದಿವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ದರ್ಶನ್ ಅವರ ವ್ಯಕ್ತಿತ್ವ ಮತ್ತು ಸರಳತೆ ನನಗೆ ಇಷ್ಟ. ಅವರ ಗುಣವನ್ನು ಅನುಸರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ನನ್ನಿಂದಾಗುವ ವಸ್ತುಗಳನ್ನು ವಿತರಿಸುತ್ತೇನೆ. ಆದರೆ, ಈವರೆಗೂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿರುವುದು ಬೇಸರದ ವಿಷಯ ಎಂದರು.
ವಿಕಸನ ಸಂಸ್ಥೆಯ ಸಂಯೋಜಕ ಪ್ರದೀಪ್ ಇದ್ದರು.