ಮೈಸೂರಿನಲ್ಲಿ ಯುನಿಲೆಟ್ ಮಳಿಗೆ ಉದ್ಘಾಟಿಸಿದ ಡಾಲಿ ಧನಂಜಯ

unilet
Published on

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ‘ಯುನಿಲೆಟ್’ನ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆ ಬುಧವಾರ ದಿಂದ ಕಾರ್ಯಾರಂಭಗೊಂಡಿದ್ದು, ನಟ ಡಾಲಿ ಧನಂಜಯ ಮಳಿಗೆ ಉದ್ಘಾಟಿಸಿದರು.

ಈ ನೂತನ ಮಳಿಗೆ ಸೇರಿದಂತೆ ನಗರದಲ್ಲಿ ‘ಯುನಿಲೆಟ್’ನ ಮಳಿಗೆಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮಳಿಗೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟಿವಿ, ರೆಗ್ಯೂಲೇಟರ್, ವಾಷಿಂಗ್‌ಮೆಷಿನ್ ಸೇರಿದಂತೆ ಎಲ್ಲ ರೀತಿಯ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉತ್ಪನ್ನಗಳು ಇವೆ. ಗ್ರಾಹಕರಿಗೆ ಇಎಂಐ ಸೌಲಭ್ಯ ಹಾಗೂ ಮನೆ ಬಾಗಿಲಿಗೆ ಡೆಲಿವರಿ ಸೇವೆ ದೊರೆಯಲಿದೆ.

ಮಳಿಗೆ ಉದ್ಘಾಟಿಸಿ ಮಾತನಾಡಿದ ಡಾಲಿ ಧನಂಜಯ ಮಾತನಾಡಿ, ಯುನಿಲೆಟ್‌ನ ನಾಲ್ಕನೇ ಮಳಿಗೆ ಮೈಸೂರಿನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರ. ಈ ಮಳಿಗೆಯಲ್ಲಿ ಎಲ್ಲ ಬ್ರಾೃಂಡ್‌ನ ಎಲೆಕ್ಟ್ರಾನಿಕ್ ಉತ್ಪನ್ನಗಳು ದೊರೆಯಲಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕ ಉತ್ಪನ್ನಗಳನ್ನು ಖರೀದಿಸಬಹುದು. ಯುನಿಲೆಟ್‌ಗೆ ಶುಭವಾಗಲಿ ಎಂದು ಹಾರೈಸಿದರು.

ಯುನಿಲೆಟ್‌ನ ಬಿಜಿನೆಸ್ ಹೆಡ್ ಕೆ.ಪಿ.ಮುರಳಿ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಾವು ಸದಾ ಸಿದ್ಧರಿದ್ದೇವೆ. ನೂತನ ಮಳಿಗೆಯಲ್ಲಿ ಹಲವು ಡಿಸ್ಕೌಂಟ್ ಆಫರ್‌ಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ಗಳನ್ನು ಗ್ರಾಹಕರಿಗೆ ನೀಡುತ್ತಿದ್ದು, ಗ್ರಾಹಕರು ಈ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್‌ಅನ್ನು ಸದುಪಯೋಗ ಪಡೆದುಕೊಳ್ಳಬೇಕು. ನಾವು ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದ್ದೇವೆ ಎಂದರು.

ಈ ಸಂದರ್ಭ ಯುನಿಲೆಟ್‌ನ ಏರ್ಯ ಮ್ಯಾನೇಜರ್ ಮುಜೈಬ್ ಖಾನ್, ಪರ್ಚೈಸ್ ಹೆಡ್ ಅಭಿಜೀತ್ ಮಲ್ನಾಡ್, ಆಪರೇಷನ್ ಹೆಡ್ ಅಯಾಜ್ ಮೊಹಿದ್ದೀನ್, ಸ್ಟೋರ್ ಮ್ಯಾನೇಜರ್ ಶಬರೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net