ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದ ನಟ ಡಾಲಿ ಧನಂಜಯ-ಧನ್ಯತಾ ಆರತಕ್ಷತೆ

Actor Dali Dhananjaya-Dhanyatha's wedding held in Mysore
Published on

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶನಿವಾರ ನಟ ಡಾಲಿ ಧನಂಜಯಹಾಗೂ ಧನ್ಯತಾ ಅವರ ವಿವಾಹ ಮಹೋತ್ಸವದ ಆರತಕ್ಷತೆ ಸಡಗರ ಸಂಭ್ರಮದಿಂದ ನಡೆಯಿತು.

ಶನಿವಾರ ಸಂಜೆ ನಡೆದ ಆರತಕ್ಷತೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್,ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಾಲಿ-ಮಾಜಿ ಸಚಿವರು, ಶಾಸಕರು,ಸಂಸದರು,ಮಾಜಿ ಸಂಸದರು, ಚಲನಚಿತ್ರ ನಿರ್ಮಾಪಕರು,ನಿರ್ದೇಶಕರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ನೂತನ ವಧು-ವರನಿಗೆ ಆಶೀರ್ವಾದ ಮಾಡಿದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಡಾಲಿ ಅವರನ್ನು ಕಣ್ತುಂಬಿಕೊಂಡು ಭರ್ಜರಿ ಭೋಜನಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net