ಕ್ರೀಡೆ ತರಲಿದೆ ನಾಯಕತ್ವದ ಗುಣ

dj clk school
Published on

ಚಳ್ಳಕೆರೆ: ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ರಾಷ್ಟ್ರಾಭಿಮಾನ ಬೆಳೆಸುತ್ತವೆ ಎಂದು ವೇದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಟಿ.ರವೀಂದ್ರ ಹೇಳಿದರು.

ತಾಲೂಕಿನ ಸಾಣೀಕೆರೆ ಸಮೀಪದ ವೇದಾ ಪಿಯು ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೀಡಾ ಚಟುವಟಿಕೆಗಳ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕು ಮಟ್ಟದಿಂದ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೆ ಕ್ರೀಡಾ ಸಾಧನೆ ಮಾಡಲು ಮೊದಲು ಶಾಲಾ ಹಂತದಲ್ಲಿ ಸಕ್ರಿಯವಾಗಬೇಕು. ಸತತ ತರಬೇತಿ ಇದ್ದವರು ಮಾತ್ರ ಗುರಿ ಸಾಧಿಸುತ್ತಾರೆ ಎಂದರು.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಇರಬೇಕು. ಪ್ರಸ್ತುತ ಸ್ಪರ್ಧಾ ಸಮಾಜದಲ್ಲಿ ಪ್ರತಿ ವಿಷಯದಲ್ಲೂ ಪರಿಣಿತಿ ಮತ್ತು ಪ್ರತಿಭಾವಂತರಾಗಿ ಬೆಳೆಯಬೇಕು. ಕ್ರೀಡಾ ಸಾಧಕರ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಅಶ್ವತ್ಥ್ ರೆಡ್ಡಿ ಮಾತನಾಡಿ, ಈಗಾಗಲೇ ವಲಯ ಮಟ್ಟದಲ್ಲಿ ವಾಲಿಬಾಲ್, ಥ್ರೋಬಾಲ್, ಪುಟ್ ಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ಅದೇ ರೀತಿ ತಾಲೂಕು ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ಜಯ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯೆ ಕೆ.ಟಿ.ಸುಗುಣಾ ಮಾತನಾಡಿ, ಬಹುತೇಕ ಪ್ರತಿಭಾವಂತರು ಗ್ರಾಮೀಣ ಹಂತದಿಂದಲೇ ಬೆಳೆದಿರುತ್ತಾರೆ. ಪ್ರತಿ ವಲಯದಲ್ಲೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಸಾಧನೆ ಕಾಣುತ್ತಿದ್ದೇವೆ.

ಅದೇ ರೀತಿ ಶಾಲೆಯ ಮಕ್ಕಳು ಕ್ರೀಡಾವಲಯದಲ್ಲಿ ಶಾಲೆಗೆ ಕೀರ್ತಿ ತರುವ ರೀತಿ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಪುಷ್ಪರಾಣಿ, ಶಿಕ್ಷಕರಾದ ವಿರೂಪಾಕ್ಷಪ್ಪ, ರವಿಕುಮಾರ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಆರ್.ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net