ನಿರಾಶ್ರಿತರ ಹೋರಾಟಕ್ಕೆ ವರ್ತಕರ ಬೆಂಬಲ

14SDPR(3)
Published on

ಸಿದ್ದಾಪುರ: ನಿರಾಶ್ರಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ನಿವೇಶನ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅಹೋರಾತ್ರಿ ಹೋರಾಟಕ್ಕೆ ಸಿದ್ದಾಪುರ ವರ್ತಕರ ಸಂಘ ಬೆಂಬಲ ಸೂಚಿಸಿತು.

ಶುಕ್ರವಾರ 2ಗಂಟೆಗಳ ಕಾಲ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಆಚರಿಸಲಾಯಿತು. ವರ್ತಕರ ಸಂಘದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ಮಾತನಾಡಿ, ನೈಜ ನಿರಾಶ್ರಿತರು ತಮ್ಮ ಹಕ್ಕಿಗಾಗಿ 5 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಖಂಡನೀಯ. ಕೂಡಲೇ ಸರ್ಕಾರಿ ಜಾಗ ಪತ್ತೆ ಹಚ್ಚಿ ನಿವೇಶನ ಒದಗಿಸಿಕೊಡಬೇಕು ಎಂದ ಅವರು, ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net