ಅನ್ಯ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

New Guntral New
Published on

ಹುಬ್ಬಳ್ಳಿ : ಇಲ್ಲಿನ ರ್ಕ ಬಸವೇಶ್ವರ ನಗರದಲ್ಲಿ ಪೌರ ಕಾರ್ವಿುಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಸೋಮವಾರದಂದು ಬಿಜೆಪಿಗೆ ಸೇರ್ಪಡೆಗೊಂಡರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿಜಯ ಗುಂಟ್ರಾಳ ಹಾಗೂ ಮತ್ತಿತರಿಗೆ ಬಿಜೆಪಿ ಧ್ವಜ ನೀಡಿ, ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಮಾದಿಗ ಸಮಾಜ ಹೆಚ್ಚಾಗಿದ್ದು, ಎಲ್ಲ ಮತದಾರರನ್ನು ಒಲೈಸಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ವಿಜಯ ಗುಂಟ್ರಾಳ ಮಾತನಾಡಿ, ಮಹಾನಗರ ಪಾಲಿಕೆ ಬಿಜೆಪಿ ಅಧಿಕಾರದ 2010 ರಿಂದ ಇದುವರೆಗಿನ ಅವಧಿಯಲ್ಲಿ ಪೌರ ಕಾರ್ವಿುಕರಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಿಜೆಪಿ ಆಡಳಿತದಲ್ಲಿನ ಮೇಯರ್​ಗಳು ಪೌರ ಕಾರ್ವಿುಕರ ಕಷ್ಟಗಳಿಗೆ ಸ್ಪಂಧಿಸಿದ್ದಾರೆ ಎಂದು ತಿಳಿಸಿದರು.

ಮೇಘರಾಜ್ ಹಿರೇಮನಿ ವಸಂತ ಬೋರೆ, ಗುರಯ್ಯ ವಿರಕ್ತಮಠ, ಹುಸೇನಪ್ಪ ಮಾದರ, ಲೋಕೇಶ್ ಪಾಲಿಮ, ಅಜಯ ಹಿರೇಮಠ, ಮರಿಯಪ್ಪ ಬುಕ್ಕನಟ್ಟಿ, ಕಿರಣಕುಮಾರ ಸೋಮರೆಡ್ಡಿ, ನಾಗರಾಜ ದೊಡ್ಡಮನಿ ಹಾಗೂ ಇತರರು ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಶೋಕ ಕಾಟವೆ, ಶಿವು ಮೆಣಸಿನಕಾಯಿ, ರಂಗಾಬದ್ದಿ, ಡಾ. ಕ್ರಾಂತಿ ಕಿರಣ, ಬಸವರಾಜ ಅಮ್ಮಿನಭಾವಿ, ಶಶಿಕಾಂತ ಬಿಜವಾಡ, ಸಂತೋಷ ಅರೆಕೇರಿ, ಅಣ್ಣಪ್ಪ ಗೋಕಾಕ, ರಾಜು ಕೋರ್ಯುಣಮಠ, ಬಸಪ್ಪ ಮಾದರ, ನಿಂಗಪ್ಪ ಮೊರಬದ, ಮರೆಪ್ಪ ರಾಮಯ್ಯನವರ, ನಾಗಪ್ಪ ಗೆಜ್ಜೆಳ್ಳಿ, ಬಸವರಾಜ ಆಲಾಪುರ, ರೇಣುಕಪ್ಪ ಕೆಲೂರ, ಗುರುನಾಥ ರೋಣ, ಶಿವರಾಜ ತಾಳಿಕೋಟಿ, ಅಭಿ ಗಂಗಾವತಿ, ಗುರುನಾಥ ಮೊರಬದ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net