ಭಕ್ತರ ಮೇಲೆ ಕಾರ್ಯಕರ್ತೆಯರ ನಿಗಾ

12Naregal3
Published on

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ದೇವಸ್ಥಾನಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಕಾವಲು ಕುಳಿತು ಭಕ್ತರ ಮೇಲೆ ನಿಗಾ ವಹಿಸಿದರು.

ಮಂಗಳವಾರ ನಿಮಿತ್ತ ಕೆಲವೆಡೆ ದೇವಸ್ಥಾನಗಳಿಗೆ ನೀರು ಹಾಕಿ, ದೇವಿಯರಿಗೆ ಉಡಿ ತುಂಬುವುದು ವಾಡಿಕೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಮಂಗಳವಾರ ವಾರ ಆಚರಿಸದಂತೆ ಗ್ರಾ.ಪಂ. ವತಿಯಿಂದ ಡಂಗುರ ಸಾರಲಾಗಿತ್ತು. ಧ್ವನಿವರ್ಧಕದ ಮೂಲಕ ದೇವಸ್ಥಾನಗಳಿಗೆ ಬಾರದಂತೆ ಮನವಿ ಮಾಡಲಾಗಿತ್ತು. ಆದರೂ, ಕೆಲವರು ದೇವಸ್ಥಾನಗಳಿಗೆ ಆಗಮಿಸುತ್ತಿರುವುದನ್ನು ಗಮನಿಸಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದೇವಸ್ಥಾನಗಳ ಮುಂದೆ ಕಾವಲು ಕುಳಿತು, ದೇವಸ್ಥಾನಕ್ಕೆ ಬರುತ್ತಿದ್ದವರಿಗೆ ತಿಳಿವಳಿಕೆ ಮೂಡಿಸಿ ಕಳುಹಿಸಿದ್ದಾರೆ. ಆಶಾ, ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಪಲ್ಲೇದ, ರತ್ನಾ ಶ್ಯಾಶಟ್ಟಿ, ನಿರ್ಮಲಾ ಕೊಪ್ಪದ, ರೇಣುಕಾ ತಿಲಗಾರ, ಖುತ್ತುಜಾ ಮುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net