ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಕಾರ್ಯಕರ್ತರ ಶ್ರಮದಾನ

3
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿಯಿಂದ ಕೆ.ಆರ್.ಆಸ್ಪತ್ರೆ ಆವರಣ ಸ್ವಚ್ಛತಾ ಕಾರ್ಯ ನಡೆಯಿತು.
ಕಾರ್ಯಕರ್ತರು, ಮುಖಂಡರು, ನಗರಪಾಲಿಕೆ, ಕೆ.ಆರ್.ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ 200ಕ್ಕ್ಕೂ ಹೆಚ್ಚು ಜನರು ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಜಯದೇವ ಹಳೇ ಕಟ್ಟಡ, ಕಲ್ಲುಕಟ್ಟಡ, ರಕ್ತನಿಧಿ ಕೇಂದ್ರದ ಆವರಣ, ಕ್ಯಾಂಟೀನ್ ಆವರಣ, ಚೆಲುವಂಬಾ ಆಸ್ಪತ್ರೆ, ಮಕ್ಕಳ ಬಿಲ್ಡಿಂಗ್ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಮಾಡಲಾಯಿತು. ಅಲ್ಲದ 6 ಟಿಪ್ಪರ್‌ಗೂ ಹೆಚ್ಚು ತ್ಯಾಜ್ಯ ಸಾಗಿಸಲಾಯಿತು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ತಳ ಸಮುದಾಯದಿಂದ ಬಂದಿರುವ ಸಿದ್ದರಾಮಯ್ಯ ಅವರು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ. ಸದಾ ನೊಂದವರಿಗೆ ಧ್ವನಿಯಾಗಿ ಎಲ್ಲ ವರ್ಗದವರಿಗೂ ಸದಾ ಒಳಿತು ಬಯಸುವ ವ್ಯಕ್ತಿ ಎಂದು ಬಣ್ಣಿಸಿದರು.
ಜನಪರ ಯೋಜನೆಗಳನ್ನು ನಾಡಿಗೆ ನೀಡುವ ಮೂಲಕ ಅಪಾರವಾದ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯರಂತಹ ವ್ಯಕ್ತಿತ್ವ ಇರುವವರ ಸಂಖ್ಯೆ ವಿರಳ. ಅವರ ನೇರ ನಡೆ, ನುಡಿ ಯುವ ರಾಜಕಾರಣಿಗಳಿಗೆ ಮಾದರಿ ಎಂದರು.
ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಸಮಾಜವಾದಿ ಮತ್ತು ಜಾತ್ಯತೀತ ಹಿನ್ನೆಲೆಯಿಂದ ಬೆಳೆದು ಬಂದಿರುವ ಸಿದ್ದರಾಮಯ್ಯ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ಈ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಸ್ವಚ್ಛಂದ ರಾಜಕಾರಣ ಅವರದು ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿತಿಬ್ಬೆಗೌಡ, ಕೆಪಿಸಿಸಿ ಪದಾಧಿಕಾರಿಗಳಾದ ಭಾಸ್ಕರ್, ಅಕ್ಬರ್ ಆಲಿ, ಜೇಸುದಾಸ್, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ಹೆಡತಲೆ ಮಂಜುನಾಥ್, ಶಿವಪ್ರಸಾದ್, ಪ್ರವೀಣ್ ಸಿದ್ದಲಿಂಗಪುರ, ಭಾಸ್ಕರ್ ಗೌಡ, ಉಮಾಶಂಕರ್, ನಾಗೇಶ್, ಚಂದ್ರು, ಡೇರಿ ವೆಂಕಟೇಶ್, ಹುಣಸೂರು ಬಸವಣ್ಣ, ಪುಟ್ಟಸ್ವಾಮಿ , ಇಲವಾಲ ಮಹೇಶ್, ಕೋಟೆ ಮಲ್ಲೇಶ್, ಕೋಟೆ ಮಂಜುನಾಥ್, ಸಂತೋಷ್ ಮಳಿಯೂರ್, ತೊರೆಮಾವು ಗಿರೀಶ್, ಶಿವಶಂಕರಮೂರ್ತಿ, ಮೋದಾಮಣಿ, ಲೇಖಾ ವೆಂಕಟೇಶ್, ಶಶಿಕಲಾ ನಾಗರಾಜ್, ಮಂಜುಳಾ ಮಂಜುನಾಥ್, ಟಿ.ಬಿ.ಚಿಕ್ಕಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net