ಕಾರ್ಯಕರ್ತರ ಶ್ರಮ ಶ್ಲಾಘನೀಯ

7CHIKODIGRAMEEN1
Published on

ರಾಯಬಾಗ: ಮತಕ್ಷೇತ್ರದ ಎಲ್ಲ ಪದಾಧಿಕಾರಿಗಳು ಪಕ್ಷವನ್ನು ಬೂತ್ ಮಟ್ಟದಿಂದ ಬಲಿಷ್ಠವಾಗಿ ಕಟ್ಟಲು ಕೈಜೋಡಿಸಿದ್ದರಿಂದ ಬೂತ್ ಕಮಿಟಿ ರಚನೆಯಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಬಿಜೆಪಿ ರಾಯಬಾಗ ಮಂಡಲದಿಂದ ಬುಧವಾರ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪಕ್ಷ ಸಂಘಟನೆಗೆ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದರು.

ಸಂಘಟನಾ ಪರ್ವ ಚುನಾವಣೆ ವೀಕ್ಷಕ ಅಮರನಾಥ ಪಾಟೀಲ ಮಾತನಾಡಿದರು. ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಪಥ್ವಿರಾಜ ಜಾಧವ ಹಾಗೂ ಬೂತ್ ಕಮಿಟಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಸಹ ಸಂಚಾಲಕ ಅಭಯ ಮಾನ್ವಿ, ಸಂಜಯ ಪಾಟೀಲ, ಅಮತ ಕುಲಕರ್ಣಿ, ಮಹೇಶ ಭಾತೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ರಾಜಶೇಖರ ಖನದಾಳೆ, ಬಸವರಾಜ ಡೋಣವಾಡೆ, ವಿಜಯ ಕೋಟಿವಾಲೆ, ಅಪ್ಪಾಸಾಹೇಬ ಬ್ಯಾಕೂಡೆ, ಅಂಕುಶ ಜಾಧವ, ಮನೋಜ ಮನಗುಳಿ, ಮಹೇಶ ಕರಮಡಿ, ಗಂಗಾಧರ ಮೈಶಾಳೆ, ವಿಜಯ ಆಕಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net