ಕಾರ್ಯಕರ್ತರೇ ಮೋದಿಗಾಗಿ ಅವಿರತ ಶ್ರಮಿಸಿ

1
ಸತ್ತಿಗೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಮತ್ತೊಮ್ಮೆ ಮೋದಿ ಗೋಡೆ ಬರಹ ಅಭಿಯಾನದಲ್ಲಿ ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿದರು. ವಿರೂಪಾಕ್ಷ ಮಾಮನಿ, ಎ್.ಎಸ್. ಸಿದ್ದನಗೌಡರ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ ಇತರರಿದ್ದರು.
Published on

ಕಡಬಿ: ಭಾರತಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಶ್ರಮವಹಿಸುವಂತೆ ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಕರೆ ನೀಡಿದರು.

ಸಮೀಪದ ಸತ್ತಿಗೇರಿ ಗ್ರಾಮದ ದಲಿತ ಕಾಲನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತ್ತೊಮ್ಮೆ ಮೋದಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಕು ಎಂದರು.

ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತ ವಿರೋಧಿಯಾಗಿ ನಡೆದುಕೊಳ್ಳುತ್ತದೆ ಎಂದರು.
ಜಿಲ್ಲಾ ಮಾಧ್ಯಮ ಸಂಚಾಲಕ ಎಸ್.ಸಿದ್ದನಗೌಡರ, ಯಲ್ಲಮ್ಮ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಬಸಯ್ಯ ಹಿರೇಮಠ, ಜಗದೀಶ್ ಕೌಜಗೇರಿ, ಗುರು ವಾಲಿ, ಗೌಡಪ್ಪ ಸವದತ್ತಿ ಮಾತನಾಡಿದರು.

ಮುಖಂಡರಾದ ಮಹಾಂತೇಶ ಗೋಡಿ, ಜಯಪ್ರಕಾಶ್ ಎಂ.ಸಿ. ಸಂದೀಪ ದೇಶಪಾಂಡೆ, ನಿತಿನ ಚೌಗಲೆ, ಸಂತೋಷ ದೇಶನೂರ, ಯಲ್ಲೇಶ ಕೋಲಕಾರ, ಪರ್ವತಗೌಡ ಪಾಟೀಲ, ಬಸನಗೌಡ ಪಾಟೀಲ, ಯಲ್ಲಪ್ಪ ಪಟ್ಟೆಪ್ಪನ್ನವರ, ಗ್ರಾಪಂ ಅಧ್ಯಕ್ಷೆ ಬಂಗಾರವ್ವ ಮಾದರ, ಹಣಮಂತ ಪಟ್ಟಪ್ಪನವರ, ಚಂದ್ರು ಅಳಗೋಡಿ, ಹಣಮಂತ ಕಳಸಪ್ಪನವರ, ಸೋಮಲಿಂಗ ಬಡ್ಡೆಪ್ಪನವರ, ಸುನೀಲ ಮಾಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net