ಬಿಜೆಪಿ ಸೋಲಿಸಲು ಕಾರ್ಯಕರ್ತರ ಸಂಕಲ್ಪ

dist congress president h.s.sundresh
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್
Published on

ಶಿವಮೊಗ್ಗ: ಟಿಕೆಟ್ ಘೋಷಣೆ ಆದ ಬಳಿಕವೂ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗಕ್ಕೆ ಬಾರದಿದ್ದರೂ ಮುಖಂಡರು, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಚುನಾವಣೆಯಲ್ಲಿ ಅವರನ್ನು ಪ್ರತಿಯೊಬ್ಬ ಕಾರ್ಯಕರ್ತನೂ ಗಂಭೀರವಾಗಿ ತೆಗೆದುಕೊಂಡಿದ್ದು ಬಿಜೆಪಿಯನ್ನು ಸೋಲಿಸಲು ಸಂಕಲ್ಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಮಾ.20ರಿಂದ ಗೀತಾ ಅವರು ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಲಿದ್ದಾರೆ. ಅವರಿಗೆ ಸಿಎಂ, ಡಿಸಿಎಂ, ಪತಿ ಶಿವರಾಜ್‌ಕುಮಾರ್ ಸೇರಿ ಹಲವರು ಸಾಥ್ ನೀಡುವರು. ಬಿಜೆಪಿ ಕಾರ್ಯಕರ್ತರು ಸದ್ಯ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲೇ ಅಸಮಾಧಾನದ ಹೊಗೆ ಆವರಿಸಿದೆ. ಕೆಲವರು ಬಂಡಾಯವೆದ್ದಿದ್ದಾರೆ. ಅದರ ಲಾಭ ಕೂಡ ಕಾಂಗ್ರೆಸ್‌ಗೆ ಆಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೀತಾ ಅವರು ಎಲ್ಲ ಗ್ರಾಪಂಗಳಿಗೂ ಹೋಗಿ ಜನರನ್ನು ಭೇಟಿ ಮಾಡುವರು. ಅದಕ್ಕಾಗಿ ಗ್ರಾಪಂವಾರು ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯ ಸುಳ್ಳು ಭರವಸೆಗಳನ್ನು ಜನರಿಗೆ ಅರಿವು ಮೂಡಿಸಿ, ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು. 30 ಲಕ್ಷ ಹುದ್ದೆ ಭರ್ತಿ, ನಾರಿ ಯೋಜನೆಯಡಿ ಒಂದು ವರ್ಷಕ್ಕೆ ಮಹಿಳೆಯರಿಗೆ ಒಂದು ಲಕ್ಷ ರೂ. ಸಹಾಯಧನ ಘೋಷಣೆ, ಯುವಕರಿಗೆ ಜರ್ಮನಿ ಮಾದರಿ ಶಿಕ್ಷಣ ಕೊಡುವುದು, ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗ ಸೃಷ್ಟಿಸುವುದು ಸೇರಿ ಈಗಾಗಲೇ ಹಲವು ಹೊಸ ಯೋಜನೆಗಳನ್ನು ಇಂಡಿಯಾ ಒಕ್ಕೂಟ ಹಾಕಿಕೊಂಡಿದ್ದು ಆ ಗ್ಯಾರಂಟಿಗಳನ್ನೂ ಈಡೇರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net