

ಚಿಕ್ಕಮಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರ ೫೭ನೇ ಹುಟ್ಟುಹಬ್ಬದ ಹಿಂದಿನ ದಿನವಾದ ಬುಧವಾರ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರುಗಳು ಸಸಿಗಳನ್ನು ನೆಡುವ ಮೂಲಕ ಜನ್ಮ ದಿನವನ್ನು ಸಂಭ್ರಮದಿAದ ಆಚರಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಒಂದು ಸಸಿ ಬೆಳೆದು ಬೃಹದಾಕಾರ ಮರವಾಗಿ ಬೆಳೆವಣಿಗೆ ಹೊಂದುವ ರೀತಿಯಲ್ಲಿ ಸಿ.ಟಿ.ರವಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೇರಿ ಜನನಾಯಕರಾಗಲಿ ಎಂದು ಆಶಿಸಿದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತ ಎರಡು ದಶಕಗಳ ಕಾಲ ಶಾಸಕರಾಗಿ ಕಾರ್ಯನಿರ್ವಹಿಸಿದ ಸಿ.ಟಿ.ರವಿ ಅವರು ಮೆಡಿಕಲ್ ಕಾಲೇಜು, ನೂತನ ಜಿಲ್ಲಾಧಿಕಾರಿ ಕಟ್ಟಡ ನಿರ್ಮಾಣದ ಕಾರಣಕರ್ತರು. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಮನೆಮಗನಂತೆ ಸಕಲ ಸೌಕರ್ಯ ಒದಗಿಸಿ ಜನಮನ್ನಣೆ ಗಳಿಸಿದ್ದಾರೆ ಎಂದರು.
ಸದಾ ಸಾರ್ವಜನಿಕರ ಶ್ರೇಯೋಭಿವೃಧ್ದಿಗೆ ಶ್ರಮಿಸಿದ ರವಿ ಅವರು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಹುದ್ದೆ ಒದಗಿಬಂತು. ಅಲ್ಲದೇ ಸಚಿವರಾಗಿ ಕೂಡಾ ಅನೇಕ ಜನಪರ ಅಭಿವೃದ್ಧಿ ಕೈಗೊಂಡು ರಾಜ್ಯಾದ್ಯಂತ ಹೆಸರು ಸಂಪಾದಿಸಿದ್ದಾರೆ ಎಂದು ಬಣ್ಣಿಸಿದರು.
ನಗರಸಭೆ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ನಗರದ ಅಭಿವೃದ್ಧಿ ವಿಚಾರದಲ್ಲೂ ರವಿ ಅವರು ಹಿಂದೇಟು ಹಾಕದೇ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ಸತತ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ ಅಭಿವೃದ್ಧಿಯ ಹರಿಹಾರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವಂತಾಗಲಿ ಎಂದು ಹಾರೈಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಬಡವರು, ಶೋಷಿತರು, ದೀನ ದಲಿತರ ಅಭಿವೃದ್ಧಿಗೆ ತಾಲೂಕಿನಲ್ಲಿ ಸಮುದಾಯ ಭವನ, ನಿವೇಶನ ರಹಿತರಿಗೆ ಭೂಮಿ ಒದಗಿಸುವುದು, ಬಲಾಡ್ಯರಿಂದ ಬಡವರ ಜಮೀನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿ ಜನಾನುರಾಗಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮ ಭರಣ್ಯ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ಉಪಾಧ್ಯಕ್ಷÀ ಮಹೇಶ್ ಈಶ್ವರಹಳ್ಳಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಪಾದಮನೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆÀ ಜಸಂತ ಅನಿಲ್ ಕುಮಾರ್, ಮುಖಂಡರಾದ ಕೋಟೆ ರಂಗನಾಥ್, ಪ್ರೇಮ್‌ಕುಮಾರ್, ಕೇಶವ ಹಿರೇಮಗಳೂರು, ಸಂತೋಷ್ ಕೋಟ್ಯಾನ್, ನೆಟ್ಟೆಕೆರೆಹಳ್ಳಿ ಜಯಣ್ಣ, ದೇವರಾಜ್, ಶಿವಕುಮಾರ್, ರಾಜೀವ್ ಹಂಪಾಪುರ, ದಿಲೀಪ್ ಹುಲಿಕೆರೆ, ಚಂದ್ರು ಹುಲಿಕೆರೆ, ರಾಜೇಶ್ ಮತ್ತಿತರರಿದ್ದರು.