ಪಕ್ಷ ಬೆಳೆಯಲು ಕಾರ್ಯಕರ್ತರು ಕಾರಣ

Activists are the reason for the party's growth.
ಸಿ.ಟಿ. ರವಿ
Published on

ಮಹಾಲಿಂಗಪುರ: ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಅಸಂಖ್ಯಾತ ನಾಯಕರು, ಕಾರ್ಯಕರ್ತರು ಕಾರಣರಾಗಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ. ರವಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವಿರಲಿ ಅಥವಾ ಪಕ್ಷವಿರಲಿ ಸಿದ್ಧಾಂತಕ್ಕೆ ಮತ್ತು ಪಕ್ಷ ನಿಷ್ಠೆಗೆ ಬದ್ಧರಾಗಿ, ಜನತೆಯ ಹಿತ ಬಯಸಿ ಕೆಲಸ ಮಾಡಬೇಕು. ಇದು ಪ್ರಜಾಪ್ರಭುತ್ವ ಆಶಯವೂ ಹೌದು ಎಂದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ನಾಯಕರಾದ ಲಾಲಕೃಷ್ಣ ಆಡ್ವಾಣಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿ ಇನ್ನು ಅನೇಕರು ತಮ್ಮ ಬದುಕು ಬದಿಗಿಟ್ಟು ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜನ ನಮಗೆ ಪಾಠ ಕಲಿಸಿದ್ದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಪಕ್ಷದ ಪುನಶ್ಚೇತನಕ್ಕೆ ಕೆಲಸ ಮಾಡಬೇಕಾಗಿದೆ ಎಂದರು.

ಪಕ್ಷದಲ್ಲಿಯ ಭಿನ್ನಮತದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮ ಒಳಗಿನ ಪ್ರಶ್ನೆಗಳಿಗೆ ಉತ್ತರ ಹೇಳುವುದು ಕಷ್ಟ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡಿದರೆ ಖಂಡಿತ ಜನ ನಮ್ಮ ಕೈ ಹಿಡಿಯುತ್ತಾರೆ. ಏರಿಸುವವರೂ ಅವರೇ-ಇಳಿಸುವವರೂ ಅವರೇ. ನಾನು ಎಂಬ ಜಾಗದಲ್ಲಿ ನಾವು ಎಂದು ಒಟ್ಟಿಗೆ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಅವರವರ ಭಾಗ್ಯದಲ್ಲಿರುವುದು ಸಿಕ್ಕೇ ಸಿಗುತ್ತದೆ.

ವೈಯಕ್ತಿಕವಾಗಿ ನಾನು ಯಾರನ್ನೂ ಉದ್ದೇಶಿಸಿ ಹೇಳುವುದಿಲ್ಲ. ನಮ್ಮದು ಅಭಿಪ್ರಾಯ ಮಾತ್ರ.ಪಕ್ಷದ ನಿರ್ಣಯವೇ ಅಂತಿಮ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net