

ವಿಜಯಪುರ : ಪ್ರೊ. ಎಸ್.ಎಸ್. ಆಲಗೂರ ಮೆಮೋರಿಯಲ್ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಕ್ರಿಯಾಚಿಂತಕ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 2ರಂದು ಬೆಳಗ್ಗೆ 10.30ಕ್ಕೆ ನಗರದ ಸಿಂದಗಿ ನಾಕಾ ಬಳಿಯ ಜೈ ಕರ್ನಾಟಕ ಕಾಲನಿಯ ವಿಕಾಸ ಸ್ಕೂಲ್ನಲ್ಲಿ ನಡೆಯದೆ.
ನಿವೃತ್ತ ಪ್ರಾಚಾರ್ಯ ಸಿದ್ದಣ್ಣ ಉತ್ನಾಳ ಕಾರ್ಯಕ್ರಮ ಉದ್ಘಾಟಿಸುವರು. ಕಲಬುರಗಿಯ ನಿವೃತ್ತ ಅಧ್ಯಾಪಕ ಲಿಂ.ಬ. ಹಿಟ್ಟಿನ ಅಧ್ಯಕ್ಷತೆ ವಹಿಸುವರು.
ಡಾ. ವೀಣಾ ಯರಗೋಳ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಕಮಲಾಪೂರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಚಾರ್ಯ ಯಲ್ಲಪ್ಪ ತಳವಾರ, ಗೌರವ ಉಪಸ್ಥಿತಿ ಯಾದಗಿರಿಯ ನಿವೃತ ಪ್ರಾಧ್ಯಾಪಕ ಸಿ.ಎಂ. ಪಟ್ಟೇದಾರ, ಸಾಹಿತಿ ಸಂಗಮೇಶ ಬದಾಮಿ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಎಸ್.ಎಂ. ಕಣಬೂರ, ಶಿವಲಿಂಗಪ್ಪ ಮಸರಬೋ, ನೀಲಕಂಠ ಜಮಾದಾರ, ಸಿದ್ದಪ್ಪ ಮಾಗಾಂವ, ವಿಶೇಷ ಅಹ್ವಾನಿತರಾಗಿ ಶಿವಶಂಕರ ಡೊಮನಾಳ, ನ್ಯಾಯವಾದಿ ಕೆ.ಎಫ್. ಅಂಕಲಗಿ, ಡಾ. ಪ್ರಲಾದ ಭೋವಿ, ಬಸವರಾಜ ನಾಯ್ಕೋಡಿ ಹಾಗೂ ಚಂದ್ರಶೇಖರ ಮೊಗೇರ ಭಾಗವಹಿಸುವರು ಎಂದು ಎಸ್.ಎಸ್. ಆಲಗೂರ ಮೆಮೊರಿಯಲ್ ಫೌಂಡೇಶನ್ ಅಧ್ಯಕ್ಷೆ ಸರೋಜನಿ ಗಣಪೂರ ಹಾಗೂ ಪ್ರಧಾನ ಸಂಚಾಲಕ ಎ.ಎಸ್. ಆಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.