ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿರುವೆ: ಶಿವಕುಮಾರ್ ನಾಣಯ್ಯ

SHIVA KUMAR
Published on

ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಲಭಿಸದೆ ಇರುವುದರಿಂದ ನಾನು ಮತ್ತಷ್ಟು ಪ್ರಬುದ್ಧನಾಗಿದ್ದು, ಪಕ್ಷದ ಹಿರಿಯ ನಾಯಕರ ಅಣತಿಯಂತೆ ಸಕ್ರಿಯ ಕಾರ್ಯಕರ್ತನಾಗಿರುವೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿರಾಜಪೇಟೆ ಕ್ಷೇತ್ರದ ಮೇಲೆ ನನಗಿದ್ದ ಅಭಿಮಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಹೊಸ ಮನ್ವಂತರ ಆರಂಭಿಸಬೇಕು ಎನ್ನುವ ಅಭಿಲಾಷೆ ಇತ್ತು. ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಹಿತೈಷಿಗಳು ನನ್ನನ್ನು ಚುನಾವಣೆಗೆ ಸ್ಪರ್ಧಿಸಿ ಎಂದು ಮಾಡಿದ ಒತ್ತಾಯ ಮತ್ತು ಪ್ರೋತ್ಸಾಹದಿಂದ ನನ್ನ ಹೆಸರು ರಾಜ್ಯ ಮಾತ್ರವಲ್ಲ ದೆಹಲಿಯ ಭಾರತೀಯ ಜನತಾ ಪಕ್ಷದ ವರಿ?್ಠರ ಮುಂದೆಯೂ ಪರಿಗಣಿತವಾಗುವಂತೆ ಮಾಡಿತು ಎಂದು ತಿಳಿಸಿದ್ದಾರೆ.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತದಂತೆ ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ, ಧರ್ಮ ರಕ್ಷಣೆ, ನಮ್ಮ ನಿತ್ಯದ ಕಾಯಕ. ಪಕ್ಷದ ಹಿರಿಯ ನಾಯಕರ ಅಣತಿಯಂತೆ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷವನ್ನು ಕಟ್ಟಿ ಬೆಳೆಸಲು ನನ್ನ ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net