ಕಾನಹೊಸಹಳ್ಳಿ: ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ತಿಳಿಸಿದರು.
ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲರೂ ಸಹೋದರರಂತೆ ಜೀವನ ನಡೆಸುತ್ತಿದ್ದು, ಹಬ್ಬಗಳನ್ನು ಸಹ ಎಲ್ಲರೂ ಅನ್ಯೋನ್ಯವಾಗಿ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ನಡೆದುಕೊಳ್ಳಬೇಕು. ಕಿಡಿಗೇಡಿಗಳು ಶಾಂತಿಭಂಗಕ್ಕೆ ಯತ್ನಿಸಿದರೆ ಕಾನೂನಿನಡಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಿಎಸ್‌ಐ ಸಿದ್ರಾಮ ಬಿದರಾಣಿ ಮಾತನಾಡಿ, ಬಕ್ರೀದ್‌ಅನ್ನು ಸೌಹಾರ್ದದಿಂದ ಆಚರಿಸಬೇಕು. ಕಾನೂನು ಮೀರಿ ವರ್ತಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ಧನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನಿಕಾಂತ್, ಇಜಾಜ್ ಅಹ್ಮದ್, ಗ್ರಾಪಂ ಸದಸ್ಯ ನಿಂಬಳಗೆರೆ ಜಿಲಾನ್, ಸುಲ್ತಾನಪುರ ಕಾಸೀಂಸಾಬ್, ಪೀರಾಸಾಬ್, ರಫಿಸಾಬ್, ಇಮಾಮ್, ಫೋಟೋ ಸಿದ್ದಲಿಂಗಪ್ಪ, ರಂಗನಾಥನಹಳ್ಳಿ ಅಜ್ಜಯ್ಯ, ನಾಗರಾಜ, ಹುಡೇಂ ಬೋಸೆಮಲ್ಲಯ್ಯ, ಬಿ.ಎಸ್.ಪಾಪಣ್ಣ, ಓಬಳಾಪುರ ವೀರೇಶ ಇತರರಿದ್ದರು.