

ಬೆಳಗಾವಿ: ತಾಲೂಕಿನ ಸುಳೇಬಾವಿಯಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಧರ್ಮದ ಅವಹೇಳನ ಮಾಡಿದ ನಾಝೀಯಾ ಖಾನ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಮುಸ್ಲಿಂ ಧರ್ಮಗುರು, ಅಂಜುಮನ್&ಎ&ಇಸ್ಲಾಂ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಾಝಿಯಾ ಅವರು ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ಮೇಲೆ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆಕೆಯ ಸಂಪೂರ್ಣ ಭಾಷಣ ನಿರಾಧಾರವಾಗಿದ್ದು, ಅದನ್ನು ನಾವು ಖಂಡಿಸುತ್ತೇವೆ. ಬೆಳಗಾವಿ ನಗರದಲ್ಲಿ ಎಲ್ಲ ಧರ್ಮಿಯರು ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಬೆಳಗಾವಿಯ ಸೌಹಾರ್ದತೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡುವ ಜನರಿಗೆ ನಗರದಲ್ಲಿ ಪ್ರವೇಶ ನೀಡಬಾರದು. ನಾಝಿಯಾ ಮತ್ತು ಸುಳೇಬಾವಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೌಲಾನಾ ಮುತ್ತಿ ಮಂಜೂರ, ಮೌಲಾನಾ ಸಲೀಮ್ ಇತರರಿದ್ದರು.