ಸಾರ್ವಜನಿಕ ಜಾಗ ಒತ್ತುವರಿ ತೆರವಿಗೆ ಕ್ರಮ, ಮುಂಡರಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಹುಲ್ಲಮ್ಮನವರ ಸೂಚನೆ

18MDG1 SABHE
Published on

ಮುಂಡರಗಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು.
ಕೆಲವೊಂದು ಬಡಾವಣೆಗಳಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಿರುವ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಮೀಸಲಿರುವ ಜಾಗ ಯಾರ ಹೆಸರಿನಲ್ಲಿರುತ್ತದೆ ಎನ್ನುವುದು ತಿಳಿಯದಂತಾಗಿದೆ ಎಂದು ಸದಸ್ಯ ಲಿಂಗರಾಜಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.


ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿದ್ದ ಜಾಗೆಯಲ್ಲಿ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ವಿುಸಿಕೊಂಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸದಸ್ಯ ಸಂತೋಷ ಹಿರೇಮನಿ ಒತ್ತಾಯಿಸಿದರು. ಸಾರ್ವಜನಿಕ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ರದ್ದುಪಡಿಸುವುದಕ್ಕೆ ಬರುತ್ತದೆ ಈ ಕುರಿತು ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.


ಜಗದ್ಗುರು ಅನ್ನದಾನೀಶ್ವರ ರುದ್ರಭೂಮಿಯನ್ನು ಅಭಿವೃದ್ಧಿಪಡಿಸುವ ಕುರಿತಂತೆ ಸಭೆಯಲ್ಲಿ ರ್ಚಚಿಸುವ ಸಂದರ್ಭದಲ್ಲಿ ಸದಸ್ಯರಾದ ಸಂತೋಷ ಹಿರೇಮನಿ, ರಾಜಾಭಕ್ಷಿ ಬೆಟಗೇರಿ, ರಿಹಾನಾಬೇಗಂ ಕೆಲೂರ ಮತ್ತಿತರರು ಕೇವಲ ಅನ್ನದಾನೀಶ್ವರ ರುದ್ರಭೂಮಿಯನ್ನು ಮಾತ್ರ ಏಕೆ? ಪಟ್ಟಣದಲ್ಲಿ ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದರು. ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಭರವಸೆ ನೀಡಿದರು.


ಪಟ್ಟಣದ ಹಲವು ಲೇ ಔಟ್​ಗಳ ಮಾಲೀಕರು ತಮ್ಮ ಲೇಔಟ್ ಅನ್ನು ಸರ್ಕಾರದ ನಿಯಮಾನುಸಾರ ಅಭಿವೃದ್ಧಿಪಡಿಸುತ್ತಿಲ್ಲ. ಈ ಬಗ್ಗೆ ದೂರವಾಣಿ ಮೂಲಕ ಅವರನ್ನು ಸಂರ್ಪಸಿದ್ದೇವೆ. ನೋಟಿಸ್ ನೀಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಮುಖ್ಯಾಧಿಕಾರಿ ಶಂಕರ ಸಭೆ ಗಮನಕ್ಕೆ ತಂದರು. ಆಗ ಸದಸ್ಯೆ ಕವಿತಾ ಉಳ್ಳಾಗಡ್ಡಿ ಅವರು ಲೇಔಟ್ ಮಾಲೀಕರು ಸಭೆ ಕರೆದು ರ್ಚಚಿಸಿ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದರು.


ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮತದಾನದ ಮೂಲಕ ಮಾಡಬೇಕು ಎಂದು ಸದಸ್ಯೆ ಜ್ಯೋತಿ ಹಾನಗಲ್ಲ ಮತ್ತಿತರ ಸದಸ್ಯ ಪಟ್ಟು ಹಿಡಿದರು.


30 ವರ್ಷ ಕಳೆದರೂ ವಾರ್ಡ್​ಗಳಲ್ಲಿ ಚರಂಡಿ, ರಸ್ತೆ ನಿರ್ವಿುಸುವ ಕೆಲಸವಾಗುತ್ತಿಲ್ಲ. ಪುರಸಭೆಯ ಅನುದಾನವನ್ನು ಅತ್ಯವಶ್ಯಕ ಇಂತಹ ಕೆಲಸಕ್ಕೆ ಬಳಕೆ ಮಾಡಬೇಕು ಎಂದು ಸದಸ್ಯ ಟಿ.ಬಿ. ದಂಡಿನ ಒತ್ತಾಯಿಸಿದರು. ಪಟ್ಟಣದ 8ನೇ ವಾರ್ಡ್​ನಲ್ಲಿ ಸ್ವಚ್ಛತೆ ಮಾಡಲು ಯಾರೂ ಬರುವುದಿಲ್ಲ, ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ. ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸದಸ್ಯೆ ಶಾಂತವ್ವ ಕರಡಿಕೊಳ್ಳ ಆಕ್ರೋಶ ವ್ಯಕ್ತಪಡಿಸಿದರು.


ಸದಸ್ಯರಾದ ಶಿವಪ್ಪ ಚಿಕ್ಕಣ್ಣವರ, ನಾಗರಾಜ ಹೊಂಬಳಗಟ್ಟಿ, ಪ್ರಹ್ಲಾದ್ ಹೊಸಮನಿ, ಪವನ ಮೇಟಿ, ಸುಮಾ ಬಳ್ಳಾರಿ, ಗಂಗಿಮಾಳವ್ವ ಮೋರನಾಳ, ಪ್ರಕಾಶ ಹಲವಾಗಲಿ, ಮಹ್ಮದ್​ರಫಿಕ್ ಮುಲ್ಲಾ, ರುಕ್ಮಿಣಿ ಸುಣಗಾರ, ಶಿವಾನಂದ ಬಾರಕೇರ, ದೇವಕ್ಕ ದಂಡಿನ, ರೈಮಾನಸಾಬ ಮಲ್ಲಿನಕೇರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net