ಕಲಕೇರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ

ಕನಕಗಿರಿ ತಾಲೂಕಿನ ಕಲಕೇರ ಗ್ರಾಮದ ಪಾಳುಬಿದ್ದ ಶುದ್ಧ ಕುಡಿವ ನೀರಿನ ಘಟಕವನ್ನು ಪಿಡಿಒ ಲಕ್ಷ್ಮಣ ಪರಿಶೀಲಿಸಿದರು.
ಕನಕಗಿರಿ ತಾಲೂಕಿನ ಕಲಕೇರ ಗ್ರಾಮದ ಪಾಳುಬಿದ್ದ ಶುದ್ಧ ಕುಡಿವ ನೀರಿನ ಘಟಕವನ್ನು ಪಿಡಿಒ ಲಕ್ಷ್ಮಣ ಪರಿಶೀಲಿಸಿದರು.
Published on

ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯ ಕಲಕೇರ ಸಮಸ್ಯೆಗಳ ಪರಿಹಾರಕ್ಕಾಗಿ ಪಿಡಿಒ ಲಕ್ಷ್ಮಣ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜೂ.19ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಸಮಸ್ಯೆಗಳ ಆಗರವಾದ ಕಲಕೇರ’ ಶಿರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ತೆರಳಿ ಜಾಲಿಗಿಡಗಳಿಂದ ಮುಚ್ಚಿರುವ ಚರಂಡಿಗಳು, 15ನೇ ಹಣಕಾಸು ಯೋಜನೆಯಡಿ ನಿರ್ಮಿಸಿದ ನೀರಿನ ತೊಟ್ಟಿಯ ತಳಪಾಯ ಕುಸಿದಿರುವುದನ್ನು, ಪಾಳುಬಿದ್ದ ಶುದ್ಧ ನೀರಿನ ಘಟಕ ಹಾಗೂ ಅಂಗನವಾಡಿಯನ್ನು ಪರಿಶೀಲಿಸಿದರು.

ಪಿಡಿಒ ಲಕ್ಷ್ಮಣ ಮಾತನಾಡಿ, ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಬಿದ್ದ ಮನೆಗಳ ಮಣ್ಣು ತುಂಬಿಕೊಂಡಿದೆ. ಆದ್ದರಿಂದ ಕೊಳಚೆ ನೀರು ಹರಿಯುತ್ತಿಲ್ಲ. ಚರಂಡಿಗಳನ್ನು ಜೆಸಿಬಿ ಬದಲಾಗಿ ಕಾರ್ಮಿಕರಿಂದ ಸ್ವಚ್ಛಗೊಳಿಸಲಾಗುವುದು. 3ನೇ ಅಂಗನವಾಡಿಗೆ ಕುಡಿವ ನೀರಿಗಾಗಿ ಮೋಟಾರ್ ಅಳವಡಿಸಲು, ಕಾಂಪೌಂಡ್ ನಿರ್ಮಾಣ, ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀರಿನ ತೊಟ್ಟಿಗೆ ನೀರು ತುಂಬಿಸಿ ಪರಿಶೀಲಿಸಲಾಗುವುದು. ಟ್ಯಾಂಕ್‌ನಿಂದ ನೀರು ಸೋರಿಕೆಯಾದರೆ ತಾಪಂ ಇಒ ಗಮನಕ್ಕೆ ತರಲಾಗುವುದು. ಸೋರಿಕೆಯಾಗದಿದ್ದಲ್ಲಿ ಕುಸಿದ ತಳಪಾಯವನ್ನು ಸರಿಪಡಿಸಲು ಸೂಚಿಸಲಾಗುವುದು. ನೀರಿನ ಘಟಕ ದುರಸ್ಥಿಗೊಳಿಸಲು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net