ಬೆಳೆ ಹಾನಿಗೆ ಪರಿಹಾರ ಒದಗಿಸಲು ಕ್ರಮ

Action to provide compensation for crop damage
ಇಂಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಪ್ರಕಾಶ ಪ್ಯಾಟಿ, ಎಸ್​.ಎಸ್​. ಪಾಟೀಲ, ಶಿವಯೋಗೆಪ್ಪ ಜೋತಗೊಂಡ ಇತರರಿದ್ದರು.
Published on

ಇಂಡಿ: ಭೀಮಾ ನದಿಯ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಭೀಮಾನದಿ ಪಾತ್ರದಲ್ಲಿ ರೈತರು ಬಿತ್ತನೆ ಮಾಡಿದ ತೊಗರಿ, ಉದ್ದು ಹಾನಿಯಾಗಿದ್ದು ಸ್ವತ@ ಪರಿಶೀಲಿಸಿದ್ದೇನೆ. ಬೆಳೆ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಅವರು ಮಾತನಾಡಿ, ಝಳಕಿ& ಇಂಡಿ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಲಾಗಿದೆ. ಇಂಡಿ ರೈಲು ನಿಲ್ದಾಣದಿಂದ ಹಲಸಂಗಿ ರಸ್ತೆಯನ್ನು ಈಗಾಗಲೇ ಭೈರುಣಗಿ ಗ್ರಾಮದವರೆಗೆ ಅಭಿವೃದ್ಧಿಪಡಿಸಲಾಗಿದೆ. ಮುಂದೆ ನಾಗಠಾಣ ೇತ್ರದ ಸರಹದ್ದು ಇದ್ದು, ಅದನ್ನು ಆ ಭಾಗದ ಶಾಸಕರು ಸಹ ರಸ್ತೆ ನಿರ್ಮಾಣ ಮಾಡಿಸುತ್ತಾರೆ ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ಸರಾಸರಿ ಮಳೆ ಹೆಚ್ಚಾಗಿದೆ. ಇದರಿಂದ ತೊಗರಿ, ಉದ್ದು ಬೆಳೆಗಳು ಹಾನಿಗೊಳಗಾಗುವ ಸಂಭವವಿದೆ. ಈ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ಮುಖಂಡ ಪ್ರಕಾಶ ಪ್ಯಾಟಿ, ಎಸ್​.ಎಸ್​. ಪಾಟೀಲ, ಶಿವಯೋಗೆಪ್ಪ ಜೋತಗೊಂಡ, ಜೀತಪ್ಪ ಕಲ್ಯಾಣಿ, ಮಲ್ಲನಗೌಡ ಪಾಟೀಲ, ಇಲಿಯಾಸ ಬೋರಾಮಣಿ, ನಿಂಬಾಜಿ ರಾಠೋಡ, ಜೈನುದ್ದೀನ್​ ಸೌದಾಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net