ಅರ್ಹ ಕಾರ್ವಿುಕರಿಗೆ ಅನ್ಯಾಯ ಆಗದಂತೆ ಕ್ರಮ

Action to prevent injustice to eligible workers
Published on

ಶಿಗ್ಗಾಂವಿ: ಅರ್ಹರಲ್ಲದವರು ಕಾರ್ವಿುಕ ಕಾರ್ಡ್​ಗಳನ್ನು ಪಡೆದುಕೊಂಡಿರುವುದರಿಂದ ಅರ್ಹ ಕಾರ್ವಿುಕರು ಸರ್ಕಾರದ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.

ಪಟ್ಟಣದ ಜೀತ ವಿಮುಕ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರು ಹಾಗೂ ಅಸಂಘಟಿತ ಕಾರ್ವಿುಕರ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ವಿುಕ ಇಲಾಖೆಯ ಕೆಲವು ಅಧಿಕಾರಿಗಳು ಲಂಚದ ಆಸೆಗೆ ಕಂಡಕಂಡವರಿಗೆ ಕಾರ್ವಿುಕ ಕಾರ್ಡ್ ಮಾಡಿಕೊಟ್ಟಿದ್ದು, ಶಿಗ್ಗಾಂವಿ ತಾಲೂಕಿನಲ್ಲಿ ಸುಮಾರು 50 ಸಾವಿರ ಕಾರ್ಡ್ ಮಾಡಿಕೊಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾರ್ವಿುಕ ಕಾರ್ಡ್​ಗಳನ್ನು ಮಾಡಲಾಗಿದೆ. ಆದ್ದರಿಂದ ಕಾರ್ವಿುಕ ಸಚಿವಾಲಯ ಹಾವೇರಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಕಾರ್ವಿುಕರ ಕಾರ್ಡ್​ಗಳನ್ನು ಪರಿಶೀಲಿಸುವ ಕಾರ್ಯ ಮಾಡುತ್ತಿದೆ ಎಂದರು.

ಅರ್ಹ ಕಾರ್ವಿುಕರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಅನರ್ಹರು ಕಾರ್ವಿುಕ ಕಾರ್ಡ್​ಗಳನ್ನು ಪಡೆದು ಸರ್ಕಾರದ ಸವಲತ್ತು ಪಡೆದುಕೊಳ್ಳುತ್ತಿದ್ದರೆ, ಅಧಿಕಾರಿಗಳ ಗಮನಕ್ಕೆ ತರಬೇಕು. ಅಸಂಘಟಿತ ಕಾರ್ವಿುಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಕಡುಬಡವ ಕಾರ್ವಿುಕರಿಗೆ ಸರ್ಕಾರದ ಸವಲತ್ತುಗಳು ಸಿಗುವಂತೆ ನೋಡಿಕೊಂಡು ಎಲ್ಲರ ಕಲ್ಯಾಣ ಬಯಸಬೇಕು ಎಂದರು.

ದಲಿತ ಮುಖಂಡ ಡಿ.ಎಸ್. ಮಾಳಗಿ ಮಾತನಾಡಿ, ಕಾರ್ವಿುಕ ವರ್ಗ ತನ್ನ ಕಾಯಕದಲ್ಲಿ ಕೈಲಾಸ ಕಾಣಬೇಕು. ಗಾಂಧೀಜಿಯವರು ಕಾರ್ವಿುಕರನ್ನು ದೇವರ ಮಕ್ಕಳು ಎಂದು ಹೇಳಿದ್ದಾರೆ. ಕಾರ್ವಿುಕ ಇಲಾಖೆಯಲ್ಲಿ ಹಲವಾರು ಸವಲತ್ತುಗಳಿದ್ದು, ಅವುಗಳ ಸದುಪಯೋಗ ಮಾಡಿಕೊಂಡು ಜೀವನವನ್ನು ಉನ್ನತಮಟ್ಟಕ್ಕೆ ಏರಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ, ಸಮಾಜಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸರಸ್ವತಿ ಘಜಕೋಶ, ಪುರಸಭೆಯ ಮುಖ್ಯಾಧಿಕಾರಿ ಮಲ್ಲೇಶ ಆರ್., ಕಾರ್ವಿುಕ ಸಂಘದ ಅಧ್ಯಕ್ಷ ಸುರೇಶ ಹರಿಜನ, ಅಶೋಕ ಕಾಳೆ, ಮಲ್ಲಿಕಾರ್ಜುನ ಈಳಿಗೇರ, ಎಚ್.ಐ. ಬೆಳಗಲಿ, ಮಾರುತಿ ವಡ್ಡರ, ಶಂಕರಗೌಡ್ರ ಪಾಟೀಲ, ಕರಿಯಪ್ಪ ಕಟ್ಟಿಮನಿ, ಅಬ್ದುಲ ಸತ್ತಾರ ತಿಳವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net