

ಕೆರೂರ : ಸಮೀಪದ ಹಳಗೇರಿ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಒಡೆಯುವ ಕಣಿವೆ ಮೇಲೆ ಅರಣ್ಯಾಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ವ್ಯಕ್ತಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ತಂಡ ದಾಳಿ ವೇಳೆ ಸ್ಥಳದಲ್ಲಿದ್ದ ಕಲ್ಲು ಒಡೆಯುವ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಎರಡು ಮೂರು ಬಾರಿ ಗ್ರಾಮಸ್ಥರಿಗೆ ಈ ಪ್ರದೇಶದಲ್ಲಿ ಕಲ್ಲು ಒಡೆಯ ಬೇಡಿ, ಅಕ್ರಮವಾಗಿ ಮಾರಾಟ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದೇವೆ. ಅರಣ್ಯ ಸಹಯವಾಣಿಗೆ ದೂರ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈಗಾಗಲೆ ಗ್ರಾಮಸ್ಥರು ಎ್ಸಿಯಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರಿಯನ್ನವರ ವಿಜಯವಾಣಿಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿವೆ. ನಮ್ಮ ಪೂರ್ವಜರ ಕಾಲದಿಂದಲೂ ಕಲ್ಲು ಒಡಿಯುವುದು ಮೂಲ ಉದ್ಯೋಗವಾಗಿದೆ. ಇದರಿಂದ ನಮ್ಮ ಹೊಟ್ಟೆ ತುಂಬಿಕೊಳ್ಳುತ್ತಿವೆ. ಈಗ ಏಕಾಏಕಿ ಬಂದು ಮಾಡಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ಜೀವನ ನಡೆಸೋದು ಹೇಗೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಸಿಮಿಕೇರಿ, ಹನುಮಂತ ವಡ್ಡರ, ರಮೇಶ ವಡ್ಡರ, ಹನುಮಂತ ಬದಾಮಿ, ತಿಮ್ಮಣ್ಣ ಕುಕ್ಕಾಲ, ಶಿವಾನಂದ ಮಾಳಗಿಮನಿ, ರಮೇಶ ರಾಮದುರ್ಗ, ಹನುಮಂತ ಚಿಕೊಪ್ಪ, ಉಮೇಶ ಮುಷ್ಠಿಗೇರಿ, ರಾಮಣ್ಣ ವಡ್ಡರ ಇದ್ದರು.