ಸ್ವ ಉದ್ಯೋಗ ಪ್ರೋತ್ಸಾಹಿಸಲು ಕ್ರಮ

31 ckm 2
ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಉದ್ಯೋಗ ಕಾರ್ಯಕ್ರಮದ ಡೇನಲ್ಮ್ ಯೋಜನೆಯಡಿ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿದರು. ಯೋಗೇಂದ್ರ, ಚಂದ್ರಶೇಖರ್, ಶಿವಲಿಂಗಯ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಯಡಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಿ ಜೀವನಮಟ್ಟ ಸುಧಾರಣೆಗೆ ಅವರ ಉದ್ಯೋಗಗಳನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.

ನಗರದನಗರಸಭೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸ್ವಯಂ ಉದ್ಯೋಗ ಕಾರ್ಯಕ್ರಮದ ಡೇನಲ್ಮ್ ಯೋಜನೆಯಡಿ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಸಬ್ಸಿಡಿ ಅಡಿಯಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಈಗ ಈ ವ್ಯವಸ್ಥೆ ಬದಲಾಗಿದೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
ಪಡೆದ ಸಾಲವನ್ನು ಅನ್ಯ ಉz್ದೆÃಶಕ್ಕೆ ಬಳಸದೇ ಉz್ದÉÃಶಿತ ಸ್ವ-ಉದ್ಯೋಗ ನಡೆಸಲು ಬಳಸಿ ನಿಗದಿತ ಸಮಯದಲ್ಲಿ ಸಾಲವನ್ನು ಮರು ಪಾವತಿ ಮಾಡಿದರೆ ಇತರೆಯವರು ಅರ್ಜಿ ಸಲ್ಲಿಸಿದಾಗ ಸಾಲ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಾಲ ಪಡೆದ ಫಲಾನುಭವಿಗಳು ಸ್ಥಾಪಿಸಿದ ಸ್ವ-ಉದ್ಯೋಗದಲ್ಲಿ ಲಾಭ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲ ಪಡೆದು ಮುಂದುವರೆಯಬೇಕು. ಸ್ವ-ಉದ್ಯೋಗದಲ್ಲಿ ಅನುಭವ ಇಲ್ಲದವರು ಉದ್ಯಮಶೀಲತಾ ತರಬೇತಿ ಪಡೆಯುವ ಮೂಲಕ ಉದ್ದಿಮೆಗಳಲ್ಲಿ ಯಶಸ್ಸು ಸಾಧಿಸಿರಿ ಎಂದು ಕರೆ ನೀಡಿದರು.
ಬಡವರಾಗಿ ಹುಟ್ಟಿ ಬಡವರಾಗಿಯೇ ಸಾಯಬೇಕೆಂಬ ಕಾನೂನಿಲ್ಲ. ಈ ರೀತಿಯ ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡು ಆರ್ಥಿಕ ಸದೃಢರಾಗಬೇಕೆಂದು ಸಲಹೆ ನೀಡಿದರು.
ಸ್ವಯಂ ಉದ್ಯೋಗ ಯೋಜನೆಯಡಿ ಕನಿಷ್ಟ ೨ ಲಕ್ಷ ರೂವರೆಗೆ ಸಾಲ ನೀಡಲು ಅವಕಾಶವಿದ್ದು, ಇಎಂಐ ಗಳನ್ನು ಸರಿಯಾಗಿ ಪಾವತಿ ಮಾಡಿದವರಿಗೆ ಇದಕ್ಕೆ ಬಡ್ಡಿ ಸಹಾಯಧನ ದೊರೆಯಲಿದೆ. ಬಡ ಜನರು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಬಡ್ಡಿ ಕಟ್ಟಿ ತಮ್ಮ ಜೀವನ ಹಾಳುಮಾಡಿಕೊಳ್ಳುವ ಬದಲು ಇಂತಹ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂಬAಧ ನಗರಸಭೆ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ೭೨ ಅರ್ಜಿಗಳು ಬಂದಿವೆ. ಈ ಪೈಕಿ ೨೦ ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸುವುದಾಗಿ ಕೋರಿರುವ ಅರ್ಜಿಗಳಿದ್ದು ಸಮಿತಿ ಇಂದು ಪರಿಶೀಲಿಸಿ ಬ್ಯಾಂಕ್‌ಗಳಿಗೆ ಎಲ್ಲಾ ಅರ್ಜಿಗಳನ್ನು ರವಾನಿಸಿದೆ. ಬ್ಯಾಂಕ್‌ಗಳ ಮೂಲಕ ಶಿಸ್ತಿನ ಹಣಕಾಸು ವ್ಯವಹಾರ ನಡೆಸಿದರೆ ಮುಂದೆ ನಿಮಗೆ ಆರ್ಥಿಕ ಸೌಲಭ್ಯ ಸುಲಭವಾಗಿ ದೊರೆಯುತ್ತದೆ ಎಂದರು.
ಬ್ಯಾAಕಿನಲ್ಲಿ ಉಳ್ಳವರು ಇಟ್ಟ ಹಣವನ್ನು ಸಾಮಾಜಿಕ ಸಮತೋಲನಕ್ಕೆ ಬಳಕೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ಸವಲತ್ತು ಪಡೆಯುವ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ತಮ್ಮ ವಾರ್ಡ್ಗಳಲ್ಲಿ ಸ್ವಚ್ಚತೆಗೆ ಅರಿವು ಮೂಡಿಸಬೇಕು. ಮನೆಯ ಸುತ್ತ-ಮುತ್ತ ಪರಿಸರ ಸ್ವಚ್ಚವಾಗಿದ್ದರೆ ರೋಗ-ರುಜಿನಗಳು ಬರದಂತೆ ತಡೆಯಬಹುದಾಗಿದೆ ಎಂದರು.
ಕಸವನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ ಬಗ್ಗೆ ವಾರ್ಡ್ನ ಸದಸ್ಯರಿಗೆ ಅಥವಾ ನಗರಸಭೆ ಆರೋಗ್ಯ ನಿರೀಕ್ಷಕರಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು ಸ್ವಚ್ಚ ನಗರವನ್ನಾಗಿಸಲು ನಾಗರಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರುಡ್‌ಸೆಟ್ ನಿರ್ದೇಶಕ ಯೋಗೇಂದ್ರ, ಕೈಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಶಿವಲಿಂಗಯ್ಯ ಸೇರಿದಂತೆ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net